ಇತರೆ

ಕುಂದಾಪುರ: ಗ್ಯಾರೇಜ್‌ ಮಾಲಕ ಬಸ್ರೂರು ರವಿ ಹೃದಯಾಘಾತದಿಂದ ಸಾವು 

Views: 595

ಕುಂದಾಪುರ : ಕುಂದಾಪುರ ನಗರದ ಕೆ ಎಸ್‌ ಆರ್‌ ಟಿ ಸಿ ಬಸ್ಟ್ಯಾಂಡ್‌ ಎದುರುಗಡೆಯ ಸರ್ವೀಸ್‌ ರಸ್ತೆಯಲ್ಲಿ ಅಟೋರಿಕ್ಷಾ ಗ್ಯಾರೇಜ್‌ ಮಾಲಕರಾದ ಬಸ್ರೂರು ನಿವಾಸಿ ರವಿ(49) ಎಂಬವರು ಹೃದಯಾಘಾತದಿಂದ ನಿಧನರಾದರು.

ಬಸ್ರೂರಿನ ರವಿ ಎಂಬವರು  ಗ್ಯಾರೇಜ್ ನಲ್ಲಿ ನಿದ್ರಿಸಿದ್ದರು ಇಂದು ಬೆಳಿಗ್ಗೆ ಗ್ಯಾರೇಜಿನ ಬಾಗಿಲು ತೆರೆಯದ ಹಿನ್ನಲೆಯಲ್ಲಿ ರಿಕ್ಷಾ ಚಾಲಕರೊಬ್ಬರು ನೋಡಿದಾಗ ಉಸಿರು ನಿಂತ ಸ್ಥಿತಿಯಲ್ಲಿದ್ದರು ತಕ್ಷಣ ಅವರನ್ನು ಶ್ರೀದೇವಿ ನರ್ಸಿಂಗ್‌ ಹೋಂಗೆ ಕರೆದುಕೊಂಡು ಹೋಗಲಾಯಿತು ಅಲ್ಲಿ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ

ಅವಿವಾಹಿತರಾದ ರವಿ ಎಂಬವರು ಚಿಕ್ಕಂದಿನಿಂದಲೇ ಗ್ಯಾರೇಜ್‌ ಕೆಲಸಕ್ಕೆ ಸೇರಿ ನಂತರ ರಿಕ್ಷಾ ಮೆಕಾನಿಕ್‌ ಆಗಿ ಕಳೆದ 25 ವರ್ಷಗಳಿಂದ ಅಟೋರಿಕ್ಷಾ ರಿಪೇರಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು

 

Related Articles

Back to top button
error: Content is protected !!