ಕರಾವಳಿ
ಕುಂದಾಪುರ: ಗಾಂಜಾ ಸೇವಿಸುತ್ತಿದ್ದ ಇಬ್ಬರು ವಶಕ್ಕೆ

Views: 332
ಕುಂದಾಪುರ: ಹೊಸಾಡು ಗ್ರಾಮದ ಕುಂಬಾರಮಕ್ಕಿ ಎಂಬಲ್ಲಿ ಗಾಂಜಾ ಸೇವಿಸುತ್ತಿದ್ದ ಇಬ್ಬರನ್ನು ಅಬಕಾರಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕುಂದಾಪುರ ಉಪವಿಭಾಗದ ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ಗಾಂಜಾ ಸೇವಿಸಿರುವುದನ್ನು ಕುಂದಾಪುರದ ಖಾಸಗಿ ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ.
ಕೋಟೇಶ್ವರ ಎಂಬಲ್ಲಿ ಗಣೇಶ ಗಂಗೊಳ್ಳಿಯಲ್ಲಿ ಸಚಿನ್ ಎಂಬಾತನನ್ನು ಗಾಂಜಾ ಸೇವಿಸುತ್ತಿರುವಾಗ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಅವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.






