ಕರಾವಳಿ

ಕುಂದಾಪುರ: ಕೋಡಿಯಿಂದ ಬೀಜಾಡಿಯವರೆಗೆ ಕಡಲ ತೀರಕ್ಕೆ ಬಂತು ರಾಶಿ ರಾಶಿ ಬೂತಾಯಿ ಮೀನುಗಳು!

Views: 205

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ಕೋಡಿಯಿಂದ ಬೀಜಾಡಿಯವರೆಗೆ ರಾಶಿ- ರಾಶಿ ಬೂತಾಯಿ (ಬೈಗೆ) ಮೀನುಗಳು ಕಡಲ ತೀರಕ್ಕೆ ಬಂದಿದ್ದು, ಅದನ್ನು ಕೊಂಡೊಯ್ಯಲು ಜನ ಮುಗಿ ಬಿದ್ದಿದ್ದಾರೆ.

ಶುಕ್ರವಾರ ಬೆಳಿಗ್ಗೆ ಬೀಜಾಡಿ, ಕೋಟೇಶ್ವರ, ಹಳವಳ್ಳಿ, ಕೋಡಿಯವರೆಗಿನ ಕಡಲ ಕಿನಾರೆಯಲ್ಲಿ ರಾಶಿ ರಾಶಿ ಬೂತಾಯಿ ಮೀನುಗಳು ದಡಕ್ಕೆ ಏಕ ಕಾಲದಲ್ಲಿ ಬಂದಿದ್ದು, ಅಪಾರ ಪ್ರಮಾಣದ ಮೀನು ದಡಕ್ಕೆ ಬಂದಿದೆ ಅನ್ನುವ ಸುದ್ದಿ ತೀರದ ಆಸುಪಾಸಿನ ಪರಿಸರದಲ್ಲೆಡೆ ಹಬ್ಬಿದ್ದು, ನೂರಾರು ಜನ ಮೀನಿಗಾಗಿ ಮುಗಿಬಿದ್ದರು.

ಬೂತಾಯಿ ಮೀನುಗಳು ಸಮುದ್ರದ ದಡಕ್ಕೆ ಬರುವುದನ್ನು ನೋಡಿ ಸ್ಥಳಿಯರು ಅವುಗಳನ್ನು ಚೀಲದಲ್ಲಿ ತುಂಬಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಮೀನುಗಳು ಗುಂಪಾಗಿರುತ್ತವೆ. ಈ ವೇಳೆ ದಾರಿ ತಪ್ಪಿ ಸಮುದ್ರ ಅಲೆಗಳೊಂದಿಗೆ ದಡಕ್ಕೆ ಬಂದು ಬೀಳುತ್ತವೆ. ದಡಕ್ಕೆ ಆಗಮಿಸುವ ಮೀನುಗಳು ಮತ್ತೆ ಸಮುದ್ರಕ್ಕೆ ತೆರಳಲು ಸಾಧ್ಯವಾಗುವುದಿಲ್ಲ.

ಇಂತಹ ಅಪರೂಪದ ವಿದ್ಯಮಾನ ಕೆಲವೊಮ್ಮೆ ಸಂಭವಿಸುತ್ತೆ. ಮೀನು ದಾರಿ ತಪ್ಪಿ ತೀರದ ದಿಕ್ಕು ಹಿಡಿದಾಗ ಕೊನೆಗೆ ತೆರೆಯ ಅಬ್ಬರಕ್ಕೆ ಸಿಲುಕಿ ಈ ರೀತಿ ಆಗುತ್ತದೆ ಎಂದು ಮೀನುಗಾರರು ಹೇಳುತ್ತಾರೆ.

Related Articles

Back to top button
error: Content is protected !!