ಇತರೆ

ಕುಂದಾಪುರ: ಕಾಳಾವರದಲ್ಲಿ ಚಲಿಸುವ ರೈಲಿಗೆ  ತಲೆ ಕೊಟ್ಟು ವ್ಯಕ್ತಿ ಆತ್ಮಹತ್ಯೆ

Views: 477

ಕನ್ನಡ ಕರಾವಳಿ ಸುದ್ದಿ:ಕುಂದಾಪುರ ತಾಲೂಕಿನ ಕಾಳಾವರದಲ್ಲಿ ರೈಲ್ವೆ ಬ್ರಿಡ್ಜ್ ಕೆಳಗಡೆ ಚಲಿಸುವ ರೈಲಿಗೆ ತಲೆ ಕೊಟ್ಟು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಸಂಜೆ 5:00 ಗಂಟೆ ಹೊತ್ತಿಗೆ ನಡೆದಿದೆ.

ವ್ಯಕ್ತಿಯ ರುಂಡ ಮುಂಡ ಬೇರ್ಪಟ್ಟಿದ್ದು ದೇಹ ಛಿದ್ರ ಛಿದ್ರವಾಗಿದ್ದರಿಂದ ಗುರುತಿಸಲು ಅಸಾಧ್ಯವಾಗಿದೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸುಮಾರು 40 ವರ್ಷದೊಳಗಿನ  ವ್ಯಕ್ತಿ ಎಂದು ತಿಳಿದುಬಂದಿದೆ.

ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಎಎಸ್ಐ ಲಕ್ಷ್ಮಣ್ ಪೂಜಾರಿ, ಹೆಡ್ ಕಾನ್ಸ್ಟೇಬಲ್ ರಾಘವೇಂದ್ರ, ಆರ್ ಪಿ ಎಫ್ ಸಿಬ್ಬಂದಿ ಸುಧೀರ್ ಶೆಟ್ಟಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಕಾನೂನು ಪ್ರಕ್ರಿಯೆ ನಡೆಸಿದರು. ಸ್ಥಳೀಯರ ಸಹಕಾರದೊಂದಿಗೆ ಮೃತದೇಹವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

Related Articles

Back to top button