ಕರಾವಳಿ

ಕುಂದಾಪುರ:ಮೆಡಿಕಲ್ ಓದುವ ಆಸೆ ಇಟ್ಟುಕೊಂಡ ವಿದ್ಯಾರ್ಥಿಗೆ ಇಂಜಿನಿಯರಿಂಗ್‌ ಸೀಟ್ ಬೇಡವೆಂದು ಆತ್ಮಹತ್ಯೆ

Views: 509

ಕುಂದಾಪುರ, ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಸೀಟು ಸಿಕ್ಕಿದ್ದಕ್ಕೆ ಬೇಸರಗೊಂಡ  ವಿದ್ಯಾರ್ಥಿಯೊಬ್ಬ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಕುಂದಾಪುರ ತಾಲೂಕಿನ ಹಳ್ನಾಡು ಎಂಬಲ್ಲಿ ನಡೆದಿದೆ.

ಹಳ್ನಾಡು ಗ್ರಾಮದ ಶಿವಪ್ರಸಾದ್ ಶೆಟ್ಟಿ ಎಂಬುವರ ಮಗ ಸುಪ್ರಜ್ ಶೆಟ್ಟಿ(17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಕುಂದಾಪುರದ ಆಂಗ್ಲಮಾಧ್ಯಮ ಶಾಲೆಯಲ್ಲಿ ಪಿಯು ವಿದ್ಯಾಭ್ಯಾಸ ಮಾಡಿದ್ದ ಸುಪ್ರಜ್ ಶೆಟ್ಟಿಗೆ ಮೆಡಿಕಲ್ ಓದುವ ಆಸೆ ಇಟ್ಟುಕೊಂಡಿದ್ದಾನೆ. ಆದರೆ ಆತನಿಗೆ ಬೆಂಗಳೂರಿನಲ್ಲಿ ಇಂಜಿನಿಯರ್ ಸೀಟ್ ದೊರಕಿತ್ತು. ಇದು ಆತನಿಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಆತನ ಮನೆಯವರು ಮಾತ್ರ ಮಗನಿಗೆ ಬುದ್ಧಿವಾದ ಹೇಳಿ ಬೆಂಗಳೂರಿಗೆ ಕಳುಹಿಸಲು ಬಟ್ಟೆಬರೆಗಳನ್ನು ಪ್ಯಾಕ್ ಮಾಡಿ ರೆಡಿ ಮಾಡಿದ್ದಾರೆ. ಗುರುವಾರ ಆತ ಬೆಂಗಳೂರಿಗೆ ಹೊರಡಬೇಕಿತ್ತು. ಆದರೆ ಬುಧವಾರ ಸಂಜೆ ಹಳ್ನಾಡು ಮನೆಯ ಸಮೀಪದ ಹೊಳೆಯ ಬದಿಯಲ್ಲಿ ತನ್ನ ಚಪ್ಪಲಿ ಮತ್ತು ಮೊಬೈಲ್ ಬಿಟ್ಟಿರುವುದು ಕಂಡು ಬಂದಿದೆ.

ಇದರಿಂದ ಅನುಮಾನಗೊಂಡ ಮನೆಯವರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಗುರುವಾರ ಮಧ್ಯಾಹ್ನ ಬಾಲಕನ ಮೃತದೇಹ ಅದೇ ಹೊಳೆಯಲ್ಲಿ ಪತ್ತೆಯಾಗಿದೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!