ಕರಾವಳಿ
ಕುಂದಾಪುರ:ಮುಸುಕುಧಾರಿ ತಂಡದಿಂದ ಕಳವು ಯತ್ನ ಆರೋಪಿಗಳ ಬಂಧನ

Views: 120
ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ. 66ರ ಸಮೀಪದಲ್ಲಿರುವ ಶಾನುಭಾಗ್ ಕಾಂಪ್ಲೆಕ್ಸ್‌ನಲ್ಲಿರುವ ಚಿನ್ನದ ಅಂಗಡಿಯಿಂದ ಮುಸುಕುಧಾರಿಗಳ ತಂಡವೊಂದು ನುಗ್ಗಿ ಕಳ್ಳತನ ಯತ್ನ ಕಳೆದ ಡಿಸೆಂಬರ್ ನಲ್ಲಿ ನಡೆದಿತ್ತು.ಇದೇ ತಂಡದಿಂದ ವಿವಿಧೆಡೆ ಕಳ್ಳತನ ನಡೆಸಿದ್ದರು.ಇದೀಗ ಮೂರು ತಿಂಗಳ ನಂತರ ಮೂರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅರ್ಷದ್( 23) ರಿಜ್ವಾನ್ (24) ಮಹಮ್ಮದ್ ಅರ್ಬಾಸ್( 23) ಬಂಧಿತ ಆರೋಪಿಗಳು
ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ತೆಕ್ಕಟ್ಟೆಯ ದಿನಸಿ ಅಂಗಡಿ, ಹಳ್ಳಾಡಿಯ ರೆಸ್ಟೋರೆಂಟ್, ಬೇಕರಿ, ಕೋಟ ಮೂರು ಕೈಯ ಮೆಡಿಕಲ್ ಶಾಪ್, ಸಾಹೇಬ್ರಕಟ್ಟೆ ಹೋಟೆಲ್ಲಿನಲ್ಲಿ ಕಳ್ಳತನ ನಡೆಸಿದ್ದರು.
ಕೋಟ ಪೊಲೀಸ್ ಠಾಣೆ ಪಿಎಸ್ಐ ಸುಧಾ ಪ್ರಭು ಎ ಎಸ್ ಐ ರವಿಕುಮಾರ್ ಸಿಬ್ಬಂದಿಗಳಾದ ಪ್ರಸನ್ನ ಮಾಲಾಡಿ, ವಿಜಯೇಂದ್ರ, ರಾಘವೇಂದ್ರ ,ಗಣೇಶ್, ರೇವತಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.