ಕರಾವಳಿ

ಕುಂದಾಪುರ:ಭಾರತದ ಆಧ್ಯಾತ್ಮಕ್ಕೆ ಮನಸೋತ ಯುರೋಪ್ ವರ-ಫ್ರಾನ್ಸ್ ವಧು; ಕೊಲ್ಲೂರಿನಲ್ಲಿ ಮದುವೆ

Views: 180

ಕನ್ನಡ ಕರಾವಳಿ ಸುದ್ದಿ: ಯುರೋಪ್‌ ದೇಶದ ವರ ಮತ್ತು ಫ್ರಾನ್ಸ್‌ನ ವಧು ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರೂ ಕೃಷ್ಣ ಭಕ್ತರು. ಕೊಲ್ಲೂರಿನಲ್ಲಿ ವಿವಾಹವಾಗಿದ್ದಾರೆ.

ಯುರೋಪ್ ದೇಶದ ನರೋತ್ತಮ್ ದಾಸ್ ಮತ್ತು ಫ್ರಾನ್ಸ್‌ನ ಜಾನ್ನವ್ ಭಾರತದ ಆಧ್ಯಾತ್ಮಕ್ಕೆ ಮನಸೋತ ವಿದೇಶಿ ಪ್ರಜೆಗಳು. ಕಳೆದ ಹಲವಾರು ವರ್ಷಗಳಿಂದ ಶ್ರೀ ಕೃಷ್ಣ ದೇವರ ಭಕ್ತರಾಗಿರುವ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.

ದೇಶದ ಹಲವಾರು ಧಾರ್ಮಿಕ ಕೇಂದ್ರಗಳನ್ನು ಭೇಟಿ ಮಾಡಿರುವ ಈ ಜೋಡಿ, ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ನಿರ್ಧರಿಸಿತು. ಕೊಲ್ಲೂರು ಮೂಕಾಂಬಿಕಾ ದೇವರ ಸನ್ನಿಧಾನದಲ್ಲಿ ಇಬ್ಬರು ಸತಿಪತಿಗಳಾಗಿದ್ದಾರೆ.

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಸರಳ ಆರತಕ್ಷತೆ ನಡೆಸಿ, ಸಂಗೀತ ಕಾರ್ಯಕ್ರಮವನ್ನೂ ಈ ಜೋಡಿ ಆಯೋಜಿಸಿತ್ತು. ತಮ್ಮ ವೃತ್ತಿಯನ್ನು ತೊರೆದು ಮಥುರಾದ ಬೃಂದಾವನದಲ್ಲಿ ಇಬ್ಬರೂ ಶ್ರೀ ಕೃಷ್ಣದೇವರ ಸೇವೆಯನ್ನು ಮಾಡುತ್ತಿದ್ದಾರೆ.

Related Articles

Back to top button