ಕರಾವಳಿ

ಕುಂದಾಪುರದ ಹೆಸರಾಂತ “ಪಾರಿಜಾತ ಹೋಟೆಲ್” ಮಾಲಿಕ ರಾಮಚಂದ್ರ ಭಟ್ ನಿಧನ

Views: 140

ಕುಂದಾಪುರದ ಹೆಸರಾಂತ ಹೋಟೆಲ್ ಉದ್ಯಮಿ ಪಾರಿಜಾತ ಹೋಟೆಲ್ ಸಂಸ್ಥಾಪಕ ರಾಮಚಂದ್ರ ಭಟ್( 82) ಸೋಮವಾರ ಹೃದಯಾಘಾತದಿಂದ ನಿಧನರಾದರು.

ಮೃತರು ಇಬ್ಬರು ಪುತ್ರಿಯರು, ಪುತ್ರನನ್ನು ಅಗಲಿದ್ದಾರೆ.

ಹಲವು ವರ್ಷಗಳ ಹಿಂದೆ ಕುಂದಾಪುರದ ಪೇಟೆಯ ಮುಖ್ಯ ಭಾಗದಲ್ಲಿ ಪಾರಿಜಾತ ಹೋಟೆಲ್ ಸ್ಥಾಪಿಸಿ ಜನಪ್ರಿಯರಾಗಿದ್ದರು, ರುಚಿ ಶುಚಿಗೆ ಹೆಸರಾದ ಪಾರಿಜಾತ ಹೋಟೆಲ್ ಕುಂದಾಪುರದ ಕೀರ್ತಿಗೆ ಸೇರಿಕೊಂಡಿದೆ.

ಈ ದಿನ ಏ.23ರ ಬೆಳಿಗ್ಗೆ 10 ಗಂಟೆಗೆ ಕುಂದಾಪುರ ಪಾರಿಜಾತ ಹೋಟೆಲ್ ವಠಾರದಲ್ಲಿ ಮೃತರ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ.ತದನಂತರ ಕಟ್ಕೇರಿ ಸ್ವಗೃಹದಲ್ಲಿ ಮೃತರ ಅಂತಿಮ ವಿಧಿ ವಿಧಾನಗಳು ನಡೆಯಲಿದೆ.

ಅಪರಾಹ್ನ 1 ಗಂಟೆಗೆ ಸರಿಯಾಗಿ ಕೋಟೇಶ್ವರದ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ.

Related Articles

Back to top button