ಮಾಹಿತಿ ತಂತ್ರಜ್ಞಾನ

ಕುಂದಾಪುರದ ಆರ್.ಎನ್.ಶೆಟ್ಟಿ‌‌ ಪದವಿ ಪೂರ್ವ ಕಾಲೇಜಿನಲ್ಲಿ ‘ಪೈತಾನ್ ಪ್ರೊಗ್ರಾಮ್ಮಿಂಗ್ ‘ ಓರಿಯಂಟೇಶನ್ ಕಾರ್ಯಕ್ರಮ

"ಕಂಪ್ಯೂಟರ್ ಮತ್ತು ಕೃತಕ ಬುದ್ಧಿಮತ್ತೆ ( Artificial Intelligence) ಕ್ಷೇತ್ರದಲ್ಲಾಗುತ್ತಿರುವ ಕಲ್ಪನಾತೀತ ಬೆಳವಣಿಗೆ ಆವಿಷ್ಕಾರಗಳು ತಕ್ಷಣದಲ್ಲಿ ಉದ್ಯೋಗಾವಕಾಶಕ್ಕೆ ಧಕ್ಕೆ ಎನಿಸಿದರೂ, ಕಾಲಾಂತರದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುವುದೂ ಖಚಿತ"-----ಪ್ರಾಧ್ಯಾಪಕ ಶ್ರೀ ಗಿರಿರಾಜ್ ಭಟ್

Views: 221

ಕನ್ನಡ ಕರಾವಳಿ ಸುದ್ದಿ:” ಸಾಮಾಜಿಕ‌ ಜಾಲತಾಣದ ಜನಪ್ರಿಯ ಪೋರ್ಟಲ್ ಗಳಲ್ಲೆಲ್ಲ ಬಳಕೆದಾರ ಸ್ನೇಹಿ ತಂತ್ರಾಂಶ‌ ಭಾಷೆ ಪೈತಾನ್ ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್ ಗಳನ್ನೇ ಹೆಚ್ಚಾಗಿ ಬಳಸುತ್ತಾರೆ. ಕಂಪ್ಯೂಟರ್ ಮತ್ತು ಕೃತಕ ಬುದ್ಧಿಮತ್ತೆ( Artificial Intelligence) ಕ್ಷೇತ್ರದಲ್ಲಾಗುತ್ತಿರುವ ಕಲ್ಪನಾತೀತ ಬೆಳವಣಿಗೆ ಆವಿಷ್ಕಾರಗಳು ತಕ್ಷಣದಲ್ಲಿ ಉದ್ಯೋಗಾವಕಾಶಕ್ಕೆ ಧಕ್ಕೆ ಎನಿಸಿದರೂ, ಕಾಲಾಂತರದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುವುದೂ ಖಚಿತ. ಪ್ರತಿಭೆ ಮತ್ತು ಶ್ರಮದಿಂದ ಕೆಲಸ ಮಾಡಿದರೆ ಬೇರೆ ಕ್ಷೇತ್ರಗಳಿಗಿಂತ ಕಂಪ್ಯೂಟರ್ ಕ್ಷೇತ್ರದಲ್ಲಿ ಕ್ಷಿಪ್ರವಾಗಿ‌ ಉನ್ನತ ಸ್ಥಾನ‌ ತಲುಪಬಹುದು ” ಎಂದು ಕುಂದಾಪುರದ ಆರ್. ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ‌‌ ಕಂಪ್ಯೂಟರ್ ವಿಭಾಗ ಆಯೋಜಿಸಿದ ‘ ಪೈತಾನ್ ಓರಿಯಂಟೇಶನ್ ‘ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ‌ ಡೀನ್ ಎಕಾಡೆಮಿಕ್ಸ್ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಗಿರಿರಾಜ್ ಭಟ್ ರವರು ತಿಳಿಸಿದರು.

ಕುಂದಾಪುರದ MICE ಕಂಪ್ಯೂಟರ್ ಸಂಸ್ಥೆಯ ಪ್ರಾಂಶುಪಾಲರಾದ ವಾಲ್ಟರ್ ಫೆರ್ನಾಂಡೀಸ್ ರವರು ಕಂಪ್ಯೂಟರ್ ತರಬೇತಿ ನೀಡುವ ತಮ್ಮ ಸುದೀರ್ಘ ಅನುಭವದಲ್ಲಿ‌ ಕಂಪ್ಯೂಟರ್ ಕ್ಷೇತ್ರ ಹಂತ ಹಂತವಾಗಿ ಸಾಧಿಸಿದ ಅಗಾಧ ಪ್ರಗತಿಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.

ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ಕಂಪ್ಯೂಟರ್ ವಿಭಾಗದ ಉಪನ್ಯಾಸಕರಾದ ಶ್ರೀ ಪ್ರಣವ್ ಆರ್ ತಾವು ಅಭಿವೃದ್ಧಿ ಪಡಿಸಿದ ಕೆಲವು ತಂತ್ರಾಂಶ ಭಾಷೆಯ ಬಗ್ಗೆ ಸ್ಲೈಡ್ಸ್ ಮೂಲಕ ವಿವರಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡ ಕಂಪ್ಯೂಟರ್ ವಿಷಯವನ್ನು ಉತ್ತಮ ಧ್ಯೇಯದೊಂದಿಗೆ ಕಲಿಯಬೇಕೆಂದು ಕರೆ ನೀಡಿದರು.

ಕಂಪ್ಯೂಟರ್ ವಿಭಾಗದ ಮುಖ್ಯಸ್ಥರಾದ ಸಂದೀಪ್ ಪೂಜಾರಿಯವರು ಅತಿಥಿಗಳನ್ನು ಸ್ವಾಗತಿಸಿದರು. ಕಂಪ್ಯೂಟರ್ ವಿಭಾಗದ ಉಪನ್ಯಾಸಕರಾದ ಸೂರ್ಯ ಇವರು‌ ಧನ್ಯವಾದ ಸಲ್ಲಿಸಿದರು. ಕಂಪ್ಯೂಟರ್ ವಿಭಾಗದ ಉಪನ್ಯಾಸಕ ಅಭಿಜಿತ್ ರವರು ಕಾರ್ಯಕ್ರಮ ನಿರೂಪಿಸಿದರು.

 

Related Articles

Back to top button