ಕುಂದಾಪುರದಿಂದ ಹೆಜಮಾಡಿ -ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ-66 ಮೇಲ್ದರ್ಜೆಗೆ ಏರಿಸಲು ಅನುಮೋದನೆ
Views: 193
ಕನ್ನಡ ಕರಾವಳಿ ಸುದ್ದಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆಯುತ್ತಿರುವ ನಿರಂತರ ಅಪಘಾತಗಳು, ಬಾಕಿ ಉಳಿದಿರುವ ಸರ್ವಿಸ್ ರಸ್ತೆಗಳ ನಿರ್ಮಾಣ, ಪ್ರೈ ಓವರ್ ನಿರ್ಮಾಣ ಯೋಜನೆಯ ವಿಸ್ತ್ರತ ವರದಿ ಸಿದ್ಧಪಡಿಸಲು ಅನುಮೋದನೆ ದೊರೆತಿದೆ.
ಪ್ರಮುಖವಾಗಿ ಕುಂದಾಪುರದಿಂದ ಹೆಜಮಾಡಿ -ಸುರತ್ಕಲ್ ವರೆಗಿನ ಅಭಿವೃದ್ಧಿಗಾಗಿ ಹಾಗೂ ಅವಘಡ ಪ್ರದೇಶಗಳಾದ ಮೂಲ್ಕಿ ಪಡುಬಿದ್ರಿ ಜಂಕ್ಷನ್, ಬ್ರಹ್ಮಾವರ ಪೇಟೆ, ಕೋಟ ತಿರುವು, ತೆಕ್ಕಟ್ಟೆ ಮೊದಲಾದ ಪ್ರದೇಶಗಳಲ್ಲಿ ಪ್ರೈ ಓವರ್‌ಗಳ ರಚನೆ ಮತ್ತು ದೀರ್ಘಾವಧಿ ಅಭಿವೃದ್ಧಿಗಾಗಿ ಡಿ.ಪಿ.ಆರ್. ತಯಾರಿಸಲು ಅಧಿಕೃತ ಏಜನ್ಸಿಯನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಪ್ರಕಟಿಸಿದೆ.
ಧ್ರುವ ಕನ್ಸಲ್ವೆನ್ಸಿ ಮತ್ತು ಮಾರ್ಕ್ ಸಿವಿಲ್ ಎಂಜಿನಿಯರ್‌ಸರ್ವಿಸ್ ಸಂಸ್ಥೆಗಳಿಗೆ ಜವಾಬ್ದಾರಿ ನೀಡಿದ್ದು, ಕೆಲವೇ ದಿನಗಳಲ್ಲಿ ನಿಗದಿಪಡಿಸಿದ ಏಜೆನ್ಸಿಗಳು ಸುರತ್ಕಲ್ ನಿಂದ ಕುಂದಾಪುರ ವರೆಗಿನ ರಾ.ಹೆ. 66ರ ಅಭಿವೃದ್ಧಿಗಾಗಿ ಯೋಜನಾ ವರದಿ ತಯಾರಿಸಲಿವೆ.
ಮೇಲಿನ ಡಿ.ಪಿ.ಆರ್. ಅನುಮೋದನೆಯ ಆದೇಶ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಮನವಿಯ ಮೇರೆಗೆ ಮಾಡಲಾಗಿದೆ ಎಂದು ಹೆದ್ದಾರಿ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






