ಕುಂದಾಪುರದಿಂದ ತಿರುಪತಿಗೆ ನಾಳೆಯಿಂದ ರೈಲು ಸಂಚಾರ ಆರಂಭ.. ಟಿಕೆಟ್ ದರ, ವೇಳಾಪಟ್ಟಿ ಇಲ್ಲಿದೆ..

Views: 688
ಉಡುಪಿ: ಕುಂದಾಪುರದಿಂದ ತಿರುಪತಿಗೆ ನೇರ ರೈಲು ಸಂಚಾರ ನಾಳೆ ಶನಿವಾರ ವಿಜಯದಶಮಿಯಂದು ಆರಂಭಗೊಳ್ಳಲಿದೆ.ಈ ಮೂಲಕ ಕರಾವಳಿ ಜನರ ಬಹುದಿನಗಳ ಕನಸು ಈಡೇರಿದಂತಾಗಲಿದೆ.
ಟಿಕೆಟ್ ದರ ಕುಂದಾಪುರದಿಂದ ತಿರುಪತಿಗೆ ಸ್ಲೀಪರ್ ಕೋಚ್ ನಲ್ಲಿ 510 ರೂ. ಹವಾನಿಯಂತ್ರಿತ ಕೋಚ್ ನಲ್ಲಿ 1,100 ರೂ. ಮಂತ್ರಾಲಯಕ್ಕೆ ಹೋಗುವವರಿಗೆ ದೋನೆ ಜಂಕ್ಷನ್ ಸಹಿತ ಹೈದರಾಬಾದ್ ಗೂ ರೈಲು ಸಂಪರ್ಕ ಪಡೆಯಬಹುದಾಗಿದೆ.ಈ ರೈಲು ಕೊಯಮತ್ತೂರು ಮೂಲಕ ಓಡಲಿರುವುದರಿಂದ ಸದ್ಗುರು ಜಗ್ಗಿ ವಾಸುದೇವರ ಈಶ ಯೋಗ ಕೇಂದ್ರ ಮತ್ತು ಆದಿಯೋಗಿ ದರ್ಶನಕ್ಕೂ ಅನುಕೂಲವಾಗಲಿದೆ.
ವೇಳಾಪಟ್ಟಿ ಮುರುಡೇಶ್ವರದಿಂದ ಬುಧವಾರ, ಶನಿವಾರ, ತಿರುಪತಿಯಿಂದ ಮಂಗಳವಾರ, ಶುಕ್ರವಾರ ಹೀಗೆ ವಾರಕ್ಕೆರಡು ದಿನ ರೈಲು ಓಡಲಿದೆ.
ಅಗಸ್ಟ್ 12ರ ಶನಿವಾರ ಮುರುಡೇಶ್ವರದಿಂದ ಮಧ್ಯಾಹ್ನ 3.20ಕ್ಕೆ ಹೊರಡಲಿರುವ ರೈಲು 3.45ಕ್ಕೆ ಬೈಂದೂರು, ಕುಂದಾಪುರಕ್ಕೆ4.40ಕ್ಕೆ, ಬಾರ್ಕೂರು 5 ಗಂಟೆಗೆ, ಉಡುಪಿ 5.20ಕ್ಕೆ, ಮಂಗಳೂರು 7.55ಕ್ಕೆ ತಲುಪಲಿದೆ.
ಮಂಗಳೂರಿನಿಂದ ರಾತ್ರಿ 8:05ಕ್ಕೆ ಹೊರಟ ರೈಲು ತಿರುಪತಿಗೆ ರವಿವಾರ ಬೆಳಿಗ್ಗೆ 11:30ಕ್ಕೆ ರೇಣೆಗುಂಟ ತಲುಪಿ ಇಲ್ಲಿಂದ ತಿರುಪತಿಗೆ 9 ಕಿಲೋಮೀಟರ್ ದೂರದಲ್ಲಿದೆ. ಹಾಗೂ ಹೈದರಾಬಾದಿನ ಕಾಚಿಗುಡಕ್ಕೆ ಸಂಜೆ 6 ಗಂಟೆಗೆ ತಲುಪಲಿದೆ.
ಅದ್ಧೂರಿ ಸ್ವಾಗತ ಕಾರ್ಯಕ್ರಮ ರೈಲಿನ ಮೊದಲ ಓಡಾಟವನ್ನು ಸ್ವಾಗತಿಸಲು ಕರಾವಳಿಯ ವಿವಿಧ ನಿಲ್ದಾಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕುಂದಾಪುರ ರೈಲು ಹಿತ ರಕ್ಷಣಾ ಸಮಿತಿ ಶನಿವಾರ 4 ಗಂಟೆಗೆ ಸ್ವಾಗತ ಕಾರ್ಯಕ್ರಮ ನಡೆಯಲಿದೆ.






