ಕುಂದಾಪುರ:ಗಂಡ- ಹೆಂಡತಿ ಜಗಳ, ಕಂಡ್ಲೂರು ನದಿಗೆ ಹಾರಿ ಕಾಳಾವರದ ವ್ಯಕ್ತಿ ಆತ್ಮಹತ್ಯೆ

Views: 1281
ಕುಂದಾಪುರ: ಇಲ್ಲಿಗೆ ಸಮೀಪ ಕಾಳಾವರದ ಯುವಕನೋರ್ವ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕ ಶಿಲ್ಪಿ ಮತ್ತು ಪೊಟೋಗ್ರಾಫರ್ ಕಾಳಾವರದ ರೈಲ್ಜೆ ಬ್ರಿಜ್ ಸಮೀಪ ಅಂಗನವಾಡಿ ಶಾಲೆ ಹತ್ತಿರದ ಜನತಾ ಕಾಲೋನಿ ನಿವಾಸಿ ಹರೀಶ್ ಎಂದು ತಿಳಿದು ಬಂದಿದೆ.
ಗಂಡ- ಹೆಂಡತಿ ನಡುವೆ ಜಗಳ ಉಂಟಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇಬ್ಬರ ಮನಸ್ತಾಪವನ್ನು ರಾಜಿ ಪಂಚಾಯಿತಿ ಮೂಲಕ ಸರಿಪಡಿಸಿದ್ದಾರೆ
ಠಾಣೆಗೆ ಹೋಗಿ ಮರಳಿ ಪತ್ನಿ, ತಾಯಿ, ಅಕ್ಕನೊಂದಿಗೆ ರಿಕ್ಷಾದಲ್ಲಿ ಬರುತ್ತಿದ್ದರು. ಕಂಡ್ಲೂರು ಸೇತುವೆ ಬಳಿ ತಲುಪಿದಾಗ ಕೈಗೆ ಕಟ್ಟಿದ್ದ ತಾಯತವನ್ನು ನದಿಗೆ ಎಸೆದು ಬರುತ್ತೇನೆಂದು ಹೇಳಿ ಹರೀಶ್ ರಿಕ್ಷಾವನ್ನು ನಿಲ್ಲಿಸುವಂತೆ ಚಾಲಕನಿಗೆ ಹೇಳಿದರು. ರಿಕ್ಷಾದಿಂದ ಇಳಿದು ಪತ್ನಿ, ತಾಯಿ, ಅಕ್ಕ ನೋಡ ನೋಡುತ್ತಿದ್ದಂತೆ ಸೇತುವೆಯಿಂದ ನದಿಗೆ ಹಾರಿದರು. ಸ್ಥಳದಲ್ಲಿ ಕೆಲವು ಮಂದಿ ಇದ್ದರೂ ಭಾರೀ ಮಳೆಯ ಕಾರಣ ತುಂಬಿ ಹರಿಯುತ್ತಿದ್ದ ನದಿಗೆ ಇಳಿದು ರಕ್ಷಣೆ ಮಾಡುವುದು ಕಷ್ಟವಾಗಿತ್ತು.
ಈ ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಕಂಡ್ಲೂರು ನದಿಯಲ್ಲಿ ಹರೀಶ್ ಅವರ ಶವ ಹುಡುಕಾಟದಲ್ಲಿದ್ದಾರೆ.
ಭಾರಿ ಮಳೆ ಹಾಗೂ ಪ್ರವಾಹದ ಕಾರಣದಿಂದ ಮೃತದೇಹ ಪತ್ತೆ ಕಾರ್ಯಾಚರಣೆಗೆ ವಿಳಂಬವಾಗಿ ಮೃತದೆಹವು ಇನ್ನು ಪತ್ಯೆಯಾಗದಕಾರಣ ಯಾವುದೇ ಸಮಯದಲ್ಲಿ ಕುಂದಾಪುರದ ಪಂಚ ಗಂಗಾವಳಿ ನದಿಯ ಯಾವುದೇ ಭಾಗದಲ್ಲಿ ಕಂಡುಬಂದರೂ ತಕ್ಷಣ ಮುಳುಗುತಜ್ಞ ದಿನೇಶ್ ಖಾರ್ವಿ ರಕ್ಷಣಾ ತಂಡಕ್ಕೆ ಮಾಹಿತಿ ನೀಡಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ
ದಿನೇಶ್ ಖಾರ್ವಿ :- 8618513248
ವೆಂಕಟೇಶ್ ಖಾರ್ವಿ:- 9448462781
ಸಚಿನ್ ಖಾರ್ವಿ :8197991084