ಕರಾವಳಿ
ಕುಂದಾಪುರ:ಅಂಪಾರಿನ ಹೋಟೆಲ್ ಸಿಬ್ಬಂದಿಗಳ ಮೇಲೆ ಹಲ್ಲೆ

Views: 387
ಕುಂದಾಪುರ :ಅಂಪಾರಿನ ಹೋಟೆಲ್ ಒಂದಕ್ಕೆ ಬಂದಿದ್ದ ಆರೋಪಿಗಳು ಕ್ಯಾಶಿಯರ್, ಸಪ್ಲಾಯರ್ಗಳಿಗೆ ಹಲ್ಲೆ ಮಾಡಿದ ಘಟನೆ ನಡೆದಿದೆ.
ಈ ಕುರಿತು ಕ್ಯಾಶಿಯರ್ ಸುಜಯ್ ಸಹೋದರ ಅಜಯ್ ಅವರು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಜಯ್ ಅವರು ರಾತ್ರಿ ಹೋಟೆಲ್ಲಿನ ಕ್ಯಾಶಿಯರ್ ಆಗಿರುವ ಸಹೋದರ ಸುಜಯ್ ಅವರನ್ನು ಮನೆಗೆ ಕರೆದುಕೊಂಡು ಹೋಗಲು ಬಂದಿದ್ದರು.ಆರೋಪಿಗಳಾದ ಅಭಿ, ಹರೀಶ್, ಪ್ರಜ್ವಲ್, ಸ್ವರಾಜ್ ಮತ್ತು ಇನ್ನೋರ್ವ ವ್ಯಕ್ತಿ ಅಜಯ್ ಮತ್ತು ಕ್ಯಾಶಿಯರ್ ಸುಜಯ್ ಅವರಿಗೆ ಹಲ್ಲೆ ಮಾಡಿದ್ದರು. ಆರೋಪಿ ಸ್ವರಾಜ್ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ. ಮತ್ತೋರ್ವ ಕ್ಯಾಶಿಯರ್ ಸೀತಾರಾಮ ಮತ್ತು ಸಪ್ಲಾಯರ್ಗಳು ಹೆಚ್ಚಿನ ಗಲಾಟೆಯನ್ನು ತಪ್ಪಿಸಲು ಮುಂದಾದರು. ಅನಂತರ ಆರೋಪಿಗಳು ಬೆದರಿಕೆಯನ್ನೂ ಹಾಕಿ ಹೋಗಿದ್ದಾರೆ ಎಂದು ಅಜಯ್ ಅವರು ದೂರಿನಲ್ಲಿ ತಿಳಿಸಿದ್ದಾರೆ.






