ಆರೋಗ್ಯ
ಕಾವೇರಿ ನದಿಯಲ್ಲಿ ಯೋಗ ಮಾಡುತ್ತಿದ್ದಾಗ ಖ್ಯಾತ ಯೋಗ ಪಟು ಸಾವು

Views: 69
ಕನ್ನಡ ಕರಾವಳಿ ಸುದ್ದಿ: ಕಾವೇರಿ ನದಿಯಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಾಗ ಖ್ಯಾತ ಯೋಗಪಟು ನಾಗರಾಜ್ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ ನಡೆದಿದೆ.
ನಾಗರಾಜ್ (78) ಮೃತ ಯೋಗಪಟು. ಕೊಳ್ಳೆಗಾಲದಲ್ಲಿ ಖ್ಯಾತ ಯೋಗಪಟುವಾಗಿದ್ದ ನಾಗರಾಜ್ ಕಳೆದ 30 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದರು. ನಾಗರಾಜ್ ಕಾವೇರಿ ನದಿಯಲ್ಲಿ ಇಳಿದು, ನದಿ ನೀರಿನಲ್ಲಿ ತೇಲುತ್ತಾ ಯೋಗಾಭ್ಯಾಸ ಮಾಡುತ್ತಿದ್ದರು. ಈ ವೇಲೆ ನೀರಿನಲ್ಲಿಯೇ ಸಾವನ್ನಪ್ಪಿದ್ದಾರೆ.
ನೀರಿನ ಮೇಲೆ ತೇಲುತ್ತ ಯೋಗ ಮಾಡುತ್ತಿದ್ದ ನಾಗರಾಜ್, ಎಷ್ಟು ಹೊತ್ತಾದರೂ ತೇಲುತ್ತಲೇ ಇದ್ದರು. ಇದರಿಂದ ಅನುಮಾನಗೊಂಡು ಸಮೀಪ ಹೋಗಿ ನೋಡಿದಾಗ ಅವರ ಉಸಿರು ನಿಂತಿತ್ತು.
ಕೊಳ್ಳೆಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.