ಯುವಜನ

ಕಾಲೇಜು ವಿದ್ಯಾರ್ಥಿನಿ ನಾಪತ್ತೆ, ದೂರು ದಾಖಲು 

Views: 223

ಉಡುಪಿ: ಕಾಲೇಜಿಗೆಂದು ಹೋಗಿದ್ದ ವಿದ್ಯಾರ್ಥಿನಿಯೊಬ್ಬಳು ಮನೆಗೆ ವಾಪಸಾಗದೆ ನಾಪತ್ತೆಯಾಗಿದ್ದಾಳೆ.

ಮೂಡುಬೆಳ್ಳೆಯ ವ್ಯಾಪಾರಿ ವಿವೇಕ್ ಪೈ ಅವರ ಪುತ್ರಿ ದಿಶಾ ಪೈ(19) ನಾಪತ್ತೆಯಾಗಿರುವ ವಿದ್ಯಾರ್ಥಿನಿ.

ಉಡುಪಿಯ ಖಾಸಗಿ ಕಾಲೇಜಿನಲ್ಲಿ ಬಿಬಿಎ 2ನೇ ವರ್ಷದಲ್ಲಿ ಕಲಿಯುತ್ತಿದ್ದ ಈಕೆ ಸೋಮವಾರ ಬೆಳಿಗ್ಗೆ ಮನೆಯಿಂದ ಕಾಲೇಜಿಗೆ ಹೋಗಿದ್ದು ರಾತ್ರಿಯಾದರೂ ಮನೆಗೆ ಹಿಂದಿರುಗಿರಲಿಲ್ಲ. ದಿಶಾ ಪೈ ಬಗ್ಗೆ ಸಹಪಾಠಿಗಳಲ್ಲಿ ವಿಚಾರಿಸಿಕೊಂಡಾಗ ಅವಳು ಆ ದಿನ ಕಾಲೇಜಿಗೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಮೊಬೈಲ್ ಕೂಡ ಸ್ವಿಚ್ ಆಫ್‌ ಆಗಿತ್ತು. ವಿದ್ಯಾರ್ಥಿನಿಯ ತಂದೆ ವಿವೇಕ್ ಪೈ ನೀಡಿರುವ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!