ಕರಾವಳಿ
ಕಾಲು ಜಾರಿ ತೋಡಿಗೆ ಬಿದ್ದು ಯುವಕ ಸಾವು

Views: 56
ಕಡಬ: ಕಡಬ ತಾಲೂಕಿನ ಪೇರಡ್ಕ ಎಂಬಲ್ಲಿ ತೋಡಿಗೆ ಬಿದ್ದು ಯುವಕನೊಬ್ಬ ಮೃತ ಪಟ್ಟ ಘಟನೆ ನಡೆದಿದೆ.
ಮೀನಾಡಿ ಸಮೀಪದ ದೋಳ ನಿವಾಸಿ ಉಮೇಶ (35) ಮೃತ ಪಟ್ಟವರು. ಕೆಲಸಕ್ಕೆ ಹೋಗಿದ್ದ ಅವರು ಕೆಲಸ ಮುಗಿಸಿ ಮನೆಗೆ ವಾಪಸ್ ಬರುತ್ತಿದ್ದ ವೇಳೆ ಕಾಲು ಜಾರಿ ತೋಡಿಗೆ ಬಿದ್ದಿದ್ದರು.
ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿತ್ತು. ಸುಮಾರು ಒಂದು ಕಿಲೋ ಮೀಟರ್ ಕೆಳಗಡೆ ಪೇರಡ್ಕ ಸೇತುವೆ ಬಳಿ ಮೃತದೇಹ ಪತ್ತೆಯಾಗಿದೆ.ಸ್ಥಳಕ್ಕೆ ಕಡಬ ಪೊಲೀಸರು ತೆರಳಿ ಪರಿಶೀಲನೆ ನಡೆಸಿದರು. ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






