ಕರಾವಳಿ
ಕಾರ್ಕಳ :ಪತಿ ತೀರಿದ ಮನನೊಂದು ಪತ್ನಿ ಅಂಗನವಾಡಿ ಟೀಚರ್ ಆತ್ಮಹತ್ಯೆ

Views: 235
ಕನ್ನಡ ಕರಾವಳಿ ಸುದ್ದಿ:ಪತಿ ಅಗಲಿಕೆಯ ನೋವಿನಿಂದ ಅಂಗನವಾಡಿ ಟೀಚರ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರ್ಕಳದ ಮಿಯ್ಯಾರು ಕುಂಟಿಬೈಲ್ ಮಂಜಡ್ಕ ಎಂಬಲ್ಲಿ ನಡೆದಿದೆ. ಸೌಮ್ಯ(39) ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಮಿಯ್ಯಾರು ಚರ್ಚ್ ಬಳಿಯ ಅಂಗನವಾಡಿಯಲ್ಲಿ ಟೀಚರ್ ಆಗಿ ಕಳೆದ 15 ವರ್ಷಗಳಿಂದ ಸೌಮ್ಯ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಪತಿ ಒಂದು ತಿಂಗಳ ಹಿಂದೆ ಮೃತಪಟ್ಟಿದ್ದರು. ಇದರಿಂದ ಮಾನಸಿಕವಾಗಿ ನೊಂದಿದ್ದ ಸೌಮ್ಯ, ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತದೇಹವನ್ನು ಕಾರ್ಕಳ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಮೃತ ಸೌಮ್ಯ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ