ಕರಾವಳಿ

ಕಾರವಾರ ಟಾಗೋರ್ ಮೀನುಗಾರರ ಬಲೆಗೆ ಬಿದ್ದ ಬೃಹತ್ ಗಾತ್ರದ ಕುರುಡೆ ಮೀನು

Views: 1

ಉತ್ತರ ಕನ್ನಡ ಕಾರವಾರದ ಟಾಗೋರ್ ಕಡಲ ತೀರದಲ್ಲಿ ಏಂಡಿ ಬಲೆಗೆ ಬೃಹತ್ ಗಾತ್ರದ ಕುರುಡೆ ಮೀನು ಬಿದ್ದಿದೆ.

ಕಳೆದ ಎರಡು ಮೂರು ದಿನಗಳಿಂದ ಅಬ್ಬರದ ಮಳೆ ಕಡಿಮೆಯಾಗಿದ್ದರಿಂದ ಸಾಂಪ್ರದಾಯಕ ಏಂಡಿ ಮೀನುಗಾರಿಕೆಗೆ ಬಿರುಸು ಪಡೆದಿದೆ.

ಉದಯ ಬಾನಾವಳಿ ಎನ್ನುವರ ತಂಡ ಮೀನುಗಾರಿಕೆ ಮಾಡುವಾಗ ಈ ಅಪರೂಪದ ಕುರುಡೆ ಮೀನು ಬಲೆಗೆ ಬಿದ್ದಿದೆ.

ಬಲೆಗೆ ಸಣ್ಣ ಸಣ್ಣ ಮೀನುಗಳು ಮತ್ತು ಏಡಿಗಳು ಬೀಳುತ್ತದೆ ಆದರೆ ಅಪರೂಪದವಾಗಿ ಸಿಗುವ ಈ ಕುರುಡೆ ಮೀನು ಕಂಡು ಮೀನುಗಾರರು ಸಂತಸ ಪಟ್ಟಿದ್ದಾರೆ ರುಚಿಕರವಾದ ಈ ಮೀನನ್ನು ಖರೀದಿಸಲು ಸಮುದ್ರ ತೀರದಲ್ಲಿ ಮುಗಿಬಿದ್ದು ಕೆ.ಜಿಗೆ 350 ರೂಪಾಯಿ ತನಕ ನೀನು ಮಾರಾಟ ಮಾಡಲಾಯಿತು.

Related Articles

Back to top button
error: Content is protected !!