ಕಾಂತಾರ ಚಿತ್ರದಲ್ಲಿ ಕುಲಶೇಖರನಾಗಿ ಅದ್ಭುತವಾಗಿ ನಟಿಸಿದ ಗುಲ್ಶನ್ ದೇವಯ್ಯ ಹೊಸ ಲೈಫ್ ಕಾನ್ಸೆಪ್ಟ್ !
Views: 95
ಕನ್ನಡ ಕರಾವಳಿ ಸುದ್ದಿ: ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ಕುಲಶೇಖರ ಪಾತ್ರದಿಂದ ಕನ್ನಡಿಗರ ಮೆಚ್ಚುಗೆ ಗಳಿಸಿದ ಗುಲ್ಶನ್ ದೇವಯ್ಯ ಸದ್ಯದ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಇವರ ಲೈಫ್ ಸ್ಟೋರಿ ಏನು ಅನ್ನೋದು ಎಲ್ಲರಿಗೂ ಬಹುತೇಕ ಗೊತ್ತಾಗಿದೆ. ಮದ್ವೆಯಾದ ಹುಡುಗಿಯನ್ನೆ ಮತ್ತೆ ಪ್ರೀತಿಸ್ತಿರೋದು ಇವರ ಜೀವನದ ಇನ್ನೊಂದು ಹೊಸ ಅಧ್ಯಾಯವೇ ಆಗಿದೆ.

ಗುಲ್ಶನ್ ದೇವಯ್ಯ ಮುಕ್ತ ಮನಸ್ಸಿನ ಕಲಾವಿದರೇ ಆಗಿದ್ದಾರೆ. ಮನದಲ್ಲಿ ಏನಿದಿಯೋ ಅದನ್ನ ನೇರವಾಗಿಯೇ ಹೇಳ್ತಾರೆ.ಸಿಂಪಲ್ ಆಗಿದ್ದಾರೆ. ಎಲ್ಲರೊಟ್ಟಿಗೆ ಬೆರೆಯುತ್ತಾರೆ. ಮುಂಬೈಯಲ್ಲಿ ಒಳ್ಳೆ ಹೆಸರು ಕೂಡ ಮಾಡಿಕೊಂಡಿದ್ದಾರೆ. ಬೆಂಗಳೂರಿನ ತಮ್ಮ ಅಪ್ಪ ಮತ್ತು ಅಮ್ಮನ ಮನೆಯ ನೆರೆ ಹೊರೆಯವರ ಜೊತೆಗೂ ಆತ್ಮೀಯರಾಗಿದ್ದಾರೆ.ಗುಲ್ಶನ್ ದೇವಯ್ಯ ಸದ್ಯ ಕಾಂತಾರ ಚಾಪ್ಟರ್ ಒನ್ ಚಿತ್ರದ ಕುಲಶೇಖರ ಪಾತ್ರದಿಂದಲೇ ಕನ್ನಡಿಗರಿಗೆ ಚಿರಪರಿಚಿತರಾಗಿದ್ದಾರೆ.

ಕಾಂತಾರ ಚಿತ್ರದಲ್ಲಿ ಗುಲ್ಶನ್ ದೇವಯ್ಯ ಅದ್ಭುತವಾಗಿಯೇ ನಟಿಸಿದ್ದಾರೆ. ಮೊದಲ ಅವಕಾಶದ ಈ ಚಿತ್ರದಲ್ಲಿ ನೆಗೆಟಿವ್ ರೋಲ್ ಮಾಡಿದ್ದಾರೆ. ಆದರೂ ಈ ಪಾತ್ರ ಎಲ್ಲರ ಗಮನ ಸೆಳೆದಿದ್ದಾರೆ.






