ಕರಾವಳಿ

ಕಾಂತಾರದಲ್ಲಿ ಭಾಗವಹಿಸಿದ ಅಪ್ಪು,ಕಿಟ್ಟಿ   ಜಯಭೇರಿ ಬಾರಿಸುತ್ತ ರಿಷಬ್ ಶೆಟ್ಟಿ ವಿಶ್ವಾಸ!

Views: 0

ಬೆಂಗಳೂರು: ನಟ ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾದಲ್ಲಿ ಕಂಬಳದಲ್ಲಿ ಭಾಗಿಯಾಗಿದ್ದ ಕೋಣಗಳು ಸಿಲಿಕಾನ್​ ಸಿಟಿಗೆ ಎಂಟ್ರಿ ಕೊಟ್ಟಿವೆ. ಈ ಎರಡು ಕೋಣಗಳ ಹೆಸರು ಅಪ್ಪು ಹಾಗೂ ಕಿಟ್ಟಿ. ಇದರ ಮಾಲೀಕರು ಉಡುಪಿ ಜಿಲ್ಲೆಯ ಬೈಂದೂರಿನ ಪರಮೇಶ್ವರ್ ಭಟ್. ಈ ಕೋಣಗಳು ಬೆಂಗಳೂರು ಕಂಬಳದಲ್ಲಿ‌ ಭಾಗವಹಿಸುತ್ತಿವೆ. ಅಲ್ಲದೇ ಕಾಂತಾರ ಕೋಣ ಎಂದು ಎಲ್ಲರ ಗಮನ ಸೆಳೆಯುತ್ತಿವೆ.

ಇನ್ನು, ಈ ಬಗ್ಗೆ ಮಾತಾಡಿದ ಪರಮೇಶ್ವರ್ ಭಟ್ ಅವರು, ಬಹಳಷ್ಟು ಜನರು ಈ ಕೋಣಗಳನ್ನು ನೋಡಲು ಬರುತ್ತಾ ಇರುತ್ತಾರೆ. ಕಾಂತಾರ ಸಿನಿಮಾ ಚಿತ್ರೀಕರಣದ ಮೊದಲು ರಿಷಬ್ ಶೆಟ್ಟಿ ಅವರು ನಮ್ಮ ಬಳಿ ಬಂದರು. ಬಳಿಕ ಕೋಣಗಳನ್ನು ಓಡಿಸುವ ತರಬೇತಿ ಕೊಡಿಸುವಂತೆ ಮನವಿ ಮಾಡಿದರು. ಹಾಗಾಗಿ ಅಪ್ಪು ಹಾಗೂ ಕಿಟ್ಟು ಕೋಣಗಳ ಮೂಲಕ ಕೋಣಗಳನ್ನು ಓಡಿಸುವ ತರಬೇತಿಯನ್ನು ನೀಡಿದ್ದೇವೆ. ಇಲ್ಲಿ ನಾವು ಸೋತರೆ ಏನು ಬೇಸರ ಇಲ್ಲ. ಇಲ್ಲಿಗೆ ಬಂದಿದ್ದೆ ಒಂದು ದೊಡ್ಡ ಖುಷಿ ಎಂದು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು, ಈ ಅಪ್ಪು ಹಾಗೂ ಕಿಟ್ಟಿ ಕೋಣಗಳು ಕಾಂತಾರ ಚಿತ್ರದ ಮೂಲಕ ಅತೀ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತ್ತು. ಕಾಂತಾರ ಸಿನಿಮಾದಲ್ಲಿ ಈ ಕೋಣಗಳನ್ನು ಓಡಿಸಿ ನಟ ರಿಷಬ್ ಶೆಟ್ಟಿ ಪ್ರಶಸ್ತಿ ಗೆಲ್ಲುತ್ತಾರೆ. ಇದೀಗ ಅಪ್ಪು ಮತ್ತು ಕಿಟ್ಟ ಹೆಸರಿನ ಕೋಣಗಳು ಬೆಂಗಳೂರು ಕಂಬಳದಲ್ಲಿ ವಿನ್​​ ಆಗುತ್ತಾವಾ ಎಂದು ಕಾದು ನೋಡಬೇಕಿದೆ.

Related Articles

Back to top button
error: Content is protected !!