ರಾಜಕೀಯ

ಕಾಂಗ್ರೆಸ್ ಹೈಕಮಾಂಡ್ ಮ್ಯಾರಥಾನ್ ಸಭೆ: ಸಿದ್ದು ರಾಷ್ಟ್ರ ರಾಜಕಾರಣಕ್ಕೆ, ಡಿಕೆಶಿ ರಾಜ್ಯಕ್ಕೆ?

Views: 39

ಕನ್ನಡ ಕರಾವಳಿ ಸುದ್ದಿ: ಕರ್ನಾಟಕ ರಾಜಕೀಯದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಬಿರುಸಿನ ಬೆಳವಣಿಗೆಗಳು ಈಗ ಕ್ಲೈಮ್ಯಾಕ್ಸ್ ತಲುಪಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಸಿಎಂ ಸಿದ್ದರಾಮಯ್ಯ ಜತೆ ನಡೆಸಿದ ಮ್ಯಾರಥಾನ್ ಸಭೆಗಳು, ಹಲವು ರೀತಿಯ ಚೌಕಾಶಿ ನಡೆಯಿತು. ಪಕ್ಷದ ಹೈಕಮಾಂಡ್ ಅಂತಿಮವಾಗಿ ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಂತೆ ಸೂಚಿಸಿದೆ, ಇದಕ್ಕೆ ಪ್ರತಿಯಾಗಿ ರಾಜ್ಯ ಸಭೆ ಪ್ರವೇಶಿಸುವ ಮೂಲಕ ರಾಷ್ಟ್ರ ರಾಜ ಕಾರಣದ ‘ಕೊಡುಗೆ’ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಷ್ಟ್ರ ರಾಜಕಾರಣಕ್ಕೆ ಬರುವಂತೆ, ರಾಜ್ಯ ಸಭಾ ಸದಸ್ಯರಾಗುವಂತೆ ರಾಹುಲ್ ಗಾಂಧಿ ಅವರು ಆಫರ್ ನೀಡಿದ್ದಾರೆ. ಆದರೆ ರಾಷ್ಟ್ರ ರಾಜಕಾರಣಕ್ಕೆ ಹೋಗುವ ವಿಷಯದಲ್ಲಿ ಹೆಚ್ಚು ಆಸಕ್ತಿಯನ್ನು ಸಿದ್ದರಾಮಯ್ಯ ತೋರಿಲ್ಲ ಎನ್ನಲಾಗಿದೆ. ಇಷ್ಟು ವರ್ಷಗಳ ಕಾಲ ರಾಜ್ಯದಲ್ಲಿರುವಾಗ, ಈ ಹಂತದಲ್ಲಿ ರಾಜ್ಯ ಸಭೆ ಅಥವಾ ರಾಷ್ಟ್ರರಾಜಕಾರಣಕ್ಕೆ ಬರುವ ಆಸಕ್ತಿ ಇಲ್ಲ. ಆದ್ದರಿಂದ ನಾನು ಬರುವುದಿಲ್ಲ ಎಂದು ನಯವಾಗಿಯೇ ಈ ಆಫರ್ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ರಾಜ್ಯಸಭೆ, ವಿಧಾನಪರಿಷತ್ ಚುನಾವಣೆ ಬಗ್ಗೆ ಖರ್ಗೆ, ರಾಹುಲ್ ಗಾಂಧಿ ಅವರೊಂದಿಗೆ ಸಭೆ ನಡೆಸಿದ ಬಳಿಕ ಸಿದ್ದರಾಮಯ್ಯ ಅವರು ಸುಮಾರು 30 ನಿಮಿಷಗಳ ಕಾಲ ಪ್ರತ್ಯೇಕ ಸಭೆ ನಡೆಸಿದ್ದಾರೆ. ಈ ಒನ್ ಟು ಒನ್ ಸಭೆಯಲ್ಲಿ ನಾಯಕತ್ವ ಬದಲಾವಣೆ ಸೇರಿದಂತೆ ಹಲವು ವಿಷಯಗಳು ಚರ್ಚೆಗೆ ಬಂದಿವೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರ ಬಳಿಕ ಡಿ.ಕೆ.ಶಿವಕುಮಾರ್ ಅವರೊಂದಿಗೂ ರಾಹುಲ್ ಚರ್ಚಿಸಿದ್ದು, ಇಬ್ಬರ ವಾದವನ್ನು ಆಲಿಸಿ ‘ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನ’ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಾತಿ ಸಮೀಕರಣದ ಆಧಾರದ ಮೇಲೆ ಈ ಕೆಳಗಿನ ನಾಯಕರಿಗೆ ಡಿಸಿಎಂ ಸ್ಥಾನ ನೀಡುವ ಸಾಧ್ಯತೆ ಇದೆ ಲಿಂಗಾಯತ ಕೋಟಾ ಎಂ.ಬಿ. ಪಾಟೀಲ್,  ದಲಿತ ಕೋಟಾ ಪ್ರಿಯಾಂಕ್ ಖರ್ಗೆ, ಅಲ್ಪಸಂಖ್ಯಾತ ಕೋಟಾ ಜಮೀರ್ ಅಹಮದ್ ಖಾನ್,  ಕುರುಬ/ಹಿಂದುಳಿದ ವರ್ಗ ಈ ಸ್ಥಾನಕ್ಕೆ ಅಚ್ಚರಿಯ ಆಯ್ಕೆಯಾಗಿ ಯತೀಂದ್ರ ಸಿದ್ದರಾಮಯ್ಯ ಅವರ ಹೆಸರು ಕೇಳಿಬರುತ್ತಿದೆ.

 

Related Articles

Back to top button
error: Content is protected !!