ಕಾಂಗ್ರೆಸ್ ನಾಯಕನ ನಿವಾಸದಲ್ಲಿ176 ಬ್ಯಾಗ್ಗಳಲ್ಲಿ ಕೋಟಿ.. ಕೋಟಿ ಹಣ ಪತ್ತೆ!

Views: 0
ಆದಾಯ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಧೀರಜ್ ಸಹು ಒಡಿಶಾ, ಜಾರ್ಖಂಡ್ನ ವಿವಿಧ ಸ್ಥಳಗಳಲ್ಲಿ ದಾಳಿ ಮಾಡಿದ್ದು, ಈ ವೇಳೆ ದಾಖಲೆ ಇಲ್ಲದ 200 ಕೋಟಿಗೂ ಅಧಿಕ ಮೌಲ್ಯದ ಹಣವನ್ನು ಸೀಜ್ ಮಾಡಿದ್ದಾರೆ.
ಇದೀಗ ರಾಂಚಿಯಲ್ಲಿ ಕಾಂಗ್ರೆಸ್ ನಾಯಕನಿಗೆ ಸೇರಿದ ಸಂಸ್ಥೆಯಲ್ಲಿ 3 ಬ್ಯಾಗ್ಗಳಲ್ಲಿ ಇಟ್ಟಿದ್ದ ಹಣವನ್ನು ಸೀಜ್ ಮಾಡಿದ್ದಾರೆ. ಡಿಸೆಂಬರ್ 6 ರಿಂದ ಆದಾಯ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮದ್ಯ ಉತ್ಪಾದಿಸುವ ಕಂಪನಿಯಾದ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್‌ನ ಹಲವು ಜಾಗಗಳ ಮೇಲೆ ಬೃಹತ್ ಐಟಿ ದಾಳಿ ನಡೆದಿದೆ. ಜೊತೆಗೆ ಒಡಿಶಾದಲ್ಲಿ ಇವರ ಲಿಕ್ಕರ್ ಫ್ಯಾಕ್ಟರಿಗಳನ್ನು ನೋಡಿಕೊಳ್ಳುತ್ತಿದ್ದ ಬಂಟಿ ಸಹು ನಿವಾಸದಲ್ಲಿ 19ಕ್ಕೂ ಹೆಚ್ಚು ಬ್ಯಾಗ್ಗಳಲ್ಲಿ ಇಟ್ಟಿದ್ದ ಹಣವನ್ನು ಸೀಜ್ ಮಾಡಿದ್ದಾರೆ. ಅವುಗಳ ಒಟ್ಟು ಮೊತ್ತ 20 ಕೋಟಿ ರೂಪಾಯಿ ಎನ್ನಲಾಗಿದೆ.
ವರದಿಗಳ ಪ್ರಕಾರ ಸುಮಾರು 100ಕ್ಕೂ ಹೆಚ್ಚು ಅಧಿಕಾರಿಗಳು ದಾಳಿಯಲ್ಲಿ ಭಾಗವಹಿಸಿದ್ದಾರೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. 50 ಜನರಿಂದ ಸಿಕ್ಕ ಹಣವನ್ನು ಎಣಿಸುತ್ತಿದ್ದಾರೆ. ಇಲ್ಲಿಯವರೆಗೆ ಹಣ ತುಂಬಿದ್ದ ಒಟ್ಟು 176 ಬ್ಯಾಗ್ಗಳು ಸಿಕ್ಕಿವೆ. ಅವುಗಳಲ್ಲಿ 40 ಬ್ಯಾಗ್ಗಳಲ್ಲಿರುವ ಹಣ ಮಾತ್ರ ಲೆಕ್ಕ ಹಾಕಲಾಗಿದೆ. ಸದ್ಯ ವಿಶ್ರಾಂತಿ ಪಡೆದು ಮತ್ತೆ ಎಣಿಸುತ್ತೇವೆ ಎಂದು ಅಧಿಕಾರಿ ಒಬ್ಬರು ತಿಳಿಸಿದ್ದಾರೆ.






