ಕರಾವಳಿ

ಕರಾವಳಿಯಲ್ಲಿ ವಿಪರೀತ ಹೆಚ್ಚಾದ ಮಂಗನ ಕಾಯಿಲೆ, ಜನರಲ್ಲಿ ಆತಂಕ..! ಸರಕಾರದ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ

Views: 83

ಕರಾವಳಿ ಜಿಲ್ಲೆಯಲ್ಲಿ ಮಂಗನ ಕಾಯಿಲೆ ವಿಪರೀತ ಜಾಸ್ತಿಯಾಗಿದ್ದು, ಜನರಲ್ಲಿ ಆತಂಕ ಸೃಷ್ಠಿಸಿದೆ. ಜಿಲ್ಲೆಯಲ್ಲಿ ಕೆಎಫ್‌ಡಿ ಸೋಂಕಿತರ ಸಂಖ್ಯೆ 108 ದಾಟಿದ್ದು, ಸಿದ್ದಾಪುರ ಒಂದು ತಾಲೂಕಿನಲ್ಲೇ ಇದು 100 ರ ಗಡಿ ದಾಟಿದೆ. ಸಿದ್ದಾಪುರದ ಕೊರ್ಲಕೈ ಗ್ರಾಮದಲ್ಲಿ ಅತೀ ಹೆಚ್ಚು ಸೋಂಕಿತರು ಪತ್ತೆಯಾಗಿದ್ದು, ಕೆಎಫ್‌ಡಿ ನಿಯಂತ್ರಣಕ್ಕೆ ಜಿಲ್ಲಾಡಳಿತ ವಿಫಲವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕರಾವಳಿಯ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಮಂಗನ ಕಾಯಿಲೆಯ ಮೊದಲ ಕೇಸ್ ಕಾಣಸಿತ್ತು. ಆದ್ರೆ ಈ ಹಿಂದೆ ಈ ಕಾಯಿಲೆಗೆ ನೀಡುತ್ತಿದ್ದ ಲಸಿಕೆ ಪರಿಣಾಮಕಾರಿ ಅಲ್ಲ ಎಂಬ ಕಾರಣಕ್ಕೆ ಲಸಿಕೆ ಹಿಂಪಡೆಯಲಾಗಿದೆ. ಹೀಗಾಗಿ ಈ ಕಾಯಿಲೆಯ ಚಿಕಿತ್ಸೆಗೆ ಲಸಿಕೆ ಇಲ್ಲದೆ ಕೇವಲ ಸೊಳ್ಳೆ ಉಣುಗು ಹಾಗೂ ತಿಗಣೆ ಕಚ್ಚದಂತೆ ಡಿ.ಎಮ್.ಪಿ ಆಯಿಲ್‌ ನೀಡುತ್ತಿತ್ತು. ಆದ್ರೆ ಇದೀಗ ಈ ಆಯಿಲ್ ಕೂಡಾ ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ. ಈ ಕಾರಣದಿಂದ ಕೆಎಫ್‌ಡಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಭಾದಿಸಿದ್ದು, ಈಗಾಗಲೆ 9 ಜನರ ಜೀವವನ್ನು ಆಹುತಿ ಪಡೆದುಕೊಂಡಿದೆ.

ಮಂಗನ ಕಾಯಿಲೆಯನ್ನು ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಅಂತ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಮೃತ ಕುಟುಂಬಗಳಿಗೆ ಪರಿಹಾರ ನೀಡುವ ವಿಚಾರದಲ್ಲೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ವೈದ್ಯಕೀಯ ಮೂಲಭೂತ ವ್ಯವಸ್ಥೆಯನ್ನೂ ಹೆಚ್ಚಿಸದೇ ಆರೋಗ್ಯ ಇಲಾಖೆ ನಿರ್ಲಕ್ಷ್ಯ ತಾಳಿದೆ ಅಂತ ಜನರು ಆರೋಪಿಸಿದ್ದಾರೆ. ಒಟ್ಟಾರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕೆಎಫ್‌ಡಿ ಪ್ರಕರಣ ನಿಯಂತ್ರಿಸಲು ಸರ್ಕಾರ ಮುಂದಾಗದೇ ಇರುವುದು ಹಾಗೂ ಸೂಕ್ತ ಲಸಿಕೆಯನ್ನು ಜನರಿಗೆ ನೀಡದೇ ಇರುವುದು ಜನರ ಆತಂಕವನ್ನು ಹೆಚ್ಚು ಮಾಡಿದೆ.

ಮಂಗನ ಕಾಯಿಲೆ ಹೇಗೆ ಹರಡುತ್ತದೆ?

ಫ್ಲಾವಿವಿರಿಡೆ ಎಂಬ ಹೆಸರಿನ ವೈರಸ್ನಿಂದ ಈ ಕಾಯಿಲೆ ಹರಡುತ್ತದೆ. ಈ ವೈರಸ್ ಇತರ ಪ್ರಾಣಿಗಳಿಗೆ/ಸಣ್ಣ ಪುಟ್ಟ ಜೀವಿಗಳಿಗೆ ತಗುಲಿ ಅವು ಮನುಷ್ಯರಿಗೆ ಕಚ್ಚಿದಾಗ ಮಂಗನ ಕಾಯಿಲೆ ಹರಡುತ್ತದೆ. ನಮ್ಮ ರಾಜ್ಯದ ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಾಗಿ, ಮಹಾರಾಷ್ಟ್ರ, ಕೇರಳ ಮತ್ತು ಗೋವಾ ರಾಜ್ಯಗಳಲ್ಲಿ ಮಂಗನ ಕಾಯಿಲೆಯ ಪ್ರಕರಣಗಳು ವರದಿಯಾಗಿವೆ. ಹಿರಿಯರು ಮತ್ತು ಕಿರಿಯರೆನ್ನದೇ ಎಲ್ಲರನ್ನೂ ಇದು ಬಾಧಿಸಬಹುದು.

ಮಂಗನ ಕಾಯಿಲೆ ಲಕ್ಷಣಗಳೇನು

ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಸಂಸ್ಥೆಯ ಪ್ರಕಾರ ಮನುಷ್ಯರಿಗೆ ಸಾಮಾನ್ಯವಾಗಿ ಕಾಡಿಗೆ ಹೋದಾಗ ಚಿಗಟ ಅಥವಾ ಉಣ್ಣಿಗಳಿಂದ ಈ ಕಾಯಿಲೆ ಹರಡುತ್ತದೆ. ಕೆಂಪು ಚಿಗಟ ಕಡಿದಾಗ ಬರುವ ಈ ಕಾಯಿಲೆಯ ಮೊದಲ ಲಕ್ಷಣವೇ ಸೋಂಕು ತಗುಲಿದ ಒಂದು ವಾರದ ನಂತರ ಕಾಣಿಸಿಕೊಳ್ಳುವ ಜ್ವರ. ಒಂದು ಬಾರಿ ಈ ವೈರಸ್ ದೇಹವನ್ನು ಸೇರಿದರೆ ಸತತ 10 ರಿಂದ 12 ದಿನಗಳವರೆಗೆ ಜ್ವರ ಕಾಡುತ್ತದೆ. ಚಳಿ, ಜ್ವರ, ತಲೆನೋವು, ತೀವ್ರ ಸ್ನಾಯು ನೋವು, ವಾಂತಿ, ಜೀರ್ಣಾಂಗವ್ಯೂಹದ ಸಮಸ್ಯೆಗಳು ಕಾಣಸಿಕೊಳ್ಳುತ್ತವೆ. ನಂತರ ಕಡಿಮೆ ರಕ್ತದೊತ್ತಡ, ರಕ್ತ ಕಣಗಳ (ಪ್ಲೇಟ್‌ಲೆಟ್‌ಗಳು, ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು) ಸಂಖ್ಯೆ ಕಡಿಮೆಯಾಗುವುದು, ತೀವ್ರ ತಲೆನೋವು, ಮಾನಸಿಕ ತೊಂದರೆಗಳು, ನಡುಕ ಮತ್ತು ದೃಷ್ಟಿ ಕೊರತೆಗಳು ಕಾಣಿಸಿಕೊಳ್ಳುತ್ತವೆ. ಮಂಗನ ಕಾಯಿಲೆ ಹೆಚ್ಚು ಕಾಡಿಗೆ ಹೋಗುವವರಲ್ಲಿ, ಕಾಡಿನ ಹತ್ತಿರ ಮನೆ ಇರುವವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ತಕ್ಷಣವೇ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯದಿದ್ದರೆ ಕಾಯಿಲೆ ಉಲ್ಬಣವಾಗಿ ಮಾರಣಾಂತಿಕವಾಗಬಹುದು.

Related Articles

Back to top button
error: Content is protected !!