ಕರಾವಳಿ

ಕರಾವಳಿಯಲ್ಲಿ  ಎಎನ್ಎಫ್ ಕೂಂಬಿಂಗ್ ಕಾರ್ಯಚರಣೆ: 6 ಮಂದಿ ಶಸ್ತ್ರಸಜ್ಜಿತ ನಕ್ಸಲರ ತಂಡ ಪ್ರತ್ಯಕ್ಷ..!

Views: 118

ಮಂಗಳೂರು: ಕಡಬ ತಾಲೂಕಿನ ಬಿಳಿನೆಲೆಯಲ್ಲಿ ನಕ್ಸಲರ ತಂಡ ಪ್ರತ್ಯಕ್ಷವಾದ ಘಟನೆ ಬೆಳಕಿಗೆ ಬಂದಿದೆ. ಎಎನ್ಎಫ್ ಕೂಂಬಿಂಗ್ ಕಾರ್ಯಚರಣೆ ನಡುವೆ ಮತ್ತೆ ನಕ್ಸಲರು ಪ್ರತ್ಯಕ್ಷವಾಗಿದ್ದಾರೆ.

ರಾತ್ರಿ ಬಿಳಿನೆಲೆ ಚೇರು ಎಂಬಲ್ಲಿ ನಕ್ಸಲರ ತಂಡ ಕಾಣಿಸಿಕೊಂಡಿದೆ. ಚೇರು ಗ್ರಾಮದ ಮನೆಯೊಂದಕ್ಕೆ 6 ಮಂದಿ ಶಸ್ತ್ರಸಜ್ಜಿತ ನಕ್ಸಲರ ತಂಡ ಭೇಟಿ ನೀಡಿದೆ. ಮನೆಗೆ ಬಂದು ಊಟ ಮಾಡಿ ಮೊಬೈಲ್ ಚಾರ್ಜ್ ಮಾಡಿ ತೆರಳಿದ್ದಾರೆ. ಅಷ್ಟು ಮಾತ್ರವಲ್ಲದೆ, ನಕ್ಸಲರು ಮನೆಯಿಂದ ಅಕ್ಕಿ ತೆಗೆದುಕೊಂಡು ಹೋದಿದ್ದಾರೆ ಎಂದು ತಿಳಿದುಬಂದಿದೆ. ಮೋಸ್ಟ್ ವಾಂಡೆಟ್ ನಕ್ಸಲ್ ವಿಕ್ರಮ ಗೌಡ , ಮುಂಡಗಾರು ಲತಾ‌ ತಂಡ ಪ್ರತ್ಯಕ್ಷವಾದ ಶಂಕೆ ವ್ಯಕ್ತವಾಗಿದೆ.

ಕೆಲ ದಿನಗಳ ಇಂದೆ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮಕ್ಕೆ ನಕ್ಸಲರ ತಂಡ ಭೇಟಿ ನೀಡಿತ್ತು. ಇದೀಗ ಬಿಳಿನೆಲೆ ನಕ್ಸಲರ ತಂಡ ಕಾಣಿಸಿಕೊಂಡಿದೆ. ಸದ್ಯ ದಕ್ಷಿಣ ಕನ್ನಡದ ಕರಾವಳಿಯಲ್ಲಿ ಭಯದ  ವಾತವರಣ ನಿರ್ಮಾಣವಾಗಿದೆ.

ಪಶ್ಚಿಮ ಘಟ್ಟ ಪ್ರದೇಶ ಮತ್ತೆ ನಕ್ಸಲ್‌ ಕಾರಿಡಾರ್ ಆಗುತ್ತಿದೆಯಾ ಎಂಬ ಅನುಮಾನ ಕಾಡುತ್ತಿದೆ. ಮತ್ತೊಂದೆಡೆ ಜನರಲ್ಲೂ ಆತಂಕ ಮನೆ ಮಾಡಿದೆ.

Related Articles

Back to top button