ಕರಾವಳಿ
ಕಡಬ: ಹೃದಯಾಘಾತದಿಂದ ಶಿಕ್ಷಕ ಸಾವು

Views: 143
ಕನ್ನಡ ಕರಾವಳಿ ಸುದ್ದಿ: ಶಿಕ್ಷಕರೋರ್ವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿರುವ ಘಟನೆ ಕಡಬದಲ್ಲಿ ನಡೆದಿದೆ. ಅಲಂಕಾರು ಗ್ರಾಮದ ಬಾಕಿಲ ನಿವಾಸಿ, ಪ್ರದೀಪ್ ಬಾಕಿಲ(42) ಮೃತ ಶಿಕ್ಷಕ.
ಪ್ರದೀಪ್ ಬಾಕಿಲ ಶಾಂತಿನಗರ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಡಿ.4 ರಂದು ಶಾಂತಿನಗರ ಶಾಲೆಯಲ್ಲಿ ಸ್ಕೂಲ್ ಡೇ ಕಾರ್ಯಕ್ರಮವಿತ್ತು. ಕಾರ್ಯಕ್ರಮ ಮುಗಿದ ಬಳಿಕ ಮನೆಗೆ ಬಂದು ಅಂಗಳದಲ್ಲಿ ಫೋನ್‌ನಲ್ಲಿ ಮಾತಾಡುತ್ತಿದ್ದರು ಎನ್ನಲಾಗಿದೆ. ಡಿ.5 ರಂದು ಪ್ರದೀಪ್ ಬಾಕಿಲ ಮನೆಯ ಅಂಗಳದಲ್ಲಿ ಮೃತದೇಹ ಪತ್ತೆಯಾಗಿದ್ದು, ಹೃದಯಾಘಾತಕ್ಕೊಳಗಾಗಿ ಅವರು ನಿಧನರಾಗಿದ್ದಾರೆ ಎಂದು ಹೇಳಲಾಗಿದೆ.
ಮೃತರು ಪತ್ನಿ ಶಿಕ್ಷಕಿ ಹೇಮಲತಾ ಬಾಕಿಲ, ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.