ಕರಾವಳಿ
ಕಡಬದ ಅರಣ್ಯದಲ್ಲಿ ತಲೆ ಬುರುಡೆ, ಎದೆ ಮೂಳೆಗಳು, ಕಾಲಿನ ಮೂಳೆಗಳು ಪತ್ತೆ

Views: 71
ಕಡಬ: ಕೊಂಬಾರು ಗ್ರಾಮದ ಬೊಟ್ಟಡ್ಕ ಬಳಿಯ ಕೊಂಬಾರು ಅರಣ್ಯ ಪ್ರದೇಶದಲ್ಲಿ ಸಂಪೂರ್ಣ ಕೊಳೆತು ಹೋದ ಮೃತದೇಹದ ತಲೆ ಬುರುಡೆ, ಎದೆ ಮೂಳೆಗಳು, ಕಾಲಿನ ಮೂಳೆಗಳು ಪತ್ತೆಯಾಗಿದೆ.
ಸ್ಥಳೀಯರ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ತೆರಳಿದ ವೇಳೆ ಕೊಳೆತ ಸ್ಥಿತಿಯಲ್ಲಿದ್ದ ತಲೆ ಬುರುಡೆ, ಎದೆ ಮೂಳೆಗಳು, ಕಾಲಿನ ಮೂಳೆಗಳು ಕಂಡುಬಂದಿದೆ, ಮೃತದೇಹವು ಪುರುಷ ಅಥವಾ ಮಹಿಳೆಯ ಎನ್ನುವುದು ಗುರುತಿಸಲು ಅಸಾದ್ಯ ವಾಗಿದೆ. 6 ತಿಂಗಳ ಹಿಂದೆ ಅರಣ್ಯದಲ್ಲಿ ಮೃತಪಟ್ಟಿರುವ ಸಾಧ್ಯತೆಗಳಿವೆ ಎಂದು ಶಂಕಿಸಲಾಗಿದೆ.ಕಡಬ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.