ಮತ್ತೆ ಒಂದಾಗ್ತಾರಾ ಸಲ್ಮಾನ್ ಖಾನ್-ಐಶ್ವರ್ಯಾ? ಐಶ್ ಡೈವೊರ್ಸ್ ಸುದ್ದಿ ವೈರಲ್..ನೆಟ್ಟಿಗರ ಚರ್ಚೆ..!

Views: 17
ಬಾಲಿವುಡ್ ನಟಿ ಐಶ್ವರ್ಯಾ ರೈ ವಿಚ್ಛೇದನೆ ಸುದ್ದಿ ವೈರಲ್ ಆಗಿದೆ. ಈ ವಿಚಾರ ತಿಳಿದ ನೆಟ್ಟಿಗರು ಐಶ್-ಸಲ್ಲೂ ಒಂದಾಗ್ತಾರಾ ಎಂದು ಚರ್ಚಿಸುತ್ತಿದ್ದಾರೆ.

ಐಶ್ವರ್ಯಾ ರೈ ಅವರು ಟಾಪ್ ನಟಿಯಾಗಿ ಮಿಂಚಿದ್ದ ಸಮಯದಲ್ಲಿ ಅವರು ಸಲ್ಮಾನ್ ಖಾನ್ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು ಮದುವೆಯಾಗಬೇಕೆಂದೂ ಬಯಸಿದ್ದರು. ಆದರೆ ಅದು ನಡೆಯಲಿಲ್ಲ.
ಐಶ್ವರ್ಯಾ ರೈ ಸಲ್ಮಾನ್ ಖಾನ್ ಜೊತೆ ಬ್ರೇಕಪ್ ಆದ ನಂತರ ನಟ ವಿವೇಕ್ ಜೊತೆ ಪ್ರೀತಿಯಲ್ಲಿ ಬಿದ್ದರು. ಆದರೆ ಈ ಸಂಬಂಧವೂ ಉಳಿಯಲಿಲ್ಲ. ಪ್ರೀತಿಯಲ್ಲಿ ಐಶ್ವರ್ಯಾ ಅನ್ಲಕ್ಕಿಯೋ ಅಥವಾ ಐಶ್ಗೆ ಲವ್ ಅನ್ಲಕ್ಕಿಯೋ ಗೊತ್ತಿಲ್ಲ. ಆದರೆ ಈಗ ಅವರ ಮದುವೆಯೂ ಡಿವೋರ್ಸ್ ಹಂತದಲ್ಲಿದೆ.

ಐಶ್ವರ್ಯಾ ರೈ ಅವರ ಕುಟುಂಬದ ಆಪ್ತ ಮೂಲಗಳ ಪ್ರಕಾರ ಇವರ ಮದುವೆ ಡಿವೋರ್ಸ್ ಹಂತದಲ್ಲಿದೆ. ಮಗಳಿಗಾಗಿ ಮಾತ್ರ ಜೋಡಿ ಒಟ್ಟಾಗಿ ಜೀವನ ಮಾಡುತ್ತಿದ್ದಾರೆ ಎನ್ನಲಾಗಿದೆ.
ನಟಿಯ ವಿಚ್ಛೇದನೆ ಸುದ್ದಿ ವೈರಲ್ ಆಗುತ್ತಿದ್ದಂತೆ ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಮತ್ತೆ ಒಂದಾಗುತ್ತಾರಾ ಎನ್ನುವ ಚರ್ಚೆ ಜೋರಾಗಿದೆ. ಯಾಕೆಂದರೆ ಇವರು ಬಾಲಿವುಡ್ನಲ್ಲಿ ಭಾರೀ ಫೇಮಸ್ ಆಗಿದ್ದ ಜೋಡಿ.

ಐಶ್ ಹಾಗೂ ಸಲ್ಮಾನ್ ಹಲವಾರು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಷ್ಟೇ ಅಲ್ಲದೆ ಅವರ ಸಿನಿಮಾಗಳು ಸೂಪರ್ ಹಿಟ್ ಆದವು. ಬೆಸ್ಟ್ ಆನ್ಸ್ಕ್ರೀನ್ ಜೋಡಿ ಎನಿಸಿಕೊಂಡ ಈ ಕಪಲ್ ಆಫ್ಸ್ಕ್ರೀನ್ನಲ್ಲಿಯೂ ಪ್ರೀತಿಯಲ್ಲಿ ಬಿದ್ದರು.
ಇದಕ್ಕೆ ಇನ್ನೊಂದು ಬಲವಾದ ಕಾರಣ ಏನೆಂದರೆ ಸಲ್ಮಾನ್ ಖಾನ್ ಅವರು ಇನ್ನೂ ಸಿಂಗಲ್ ಆಗಿದ್ದಾರೆ. ಅವರು ಮದುವೆಯಾಗಿಲ್ಲ. ಹಾಗಾಗಿ ಅವರು ಐಶ್ವರ್ಯಾ ರೈ ಜೊತೆ ಮತ್ತೆ ಒಂದಾಗಲಿದ್ದಾರಾ ಎನ್ನುವ ಚರ್ಚೆ ಜೋರಾಗಿದೆ.
ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ಮದುವೆಯಾಗಬೇಕಿತ್ತು. ಆದರೆ ಅವರ ನಡುವಿನ ಭಿನ್ನಾಭಿಪ್ರಾಯಗಳು ದೊಡ್ಡದಾಗಿ ಬ್ರೇಕಪ್ನಲ್ಲಿ ಕೊನೆಯಾಗುವಂತಾಯಿತು. ಈಗ ಮತ್ತೆ ಈ ಜೋಡಿ ಒಂದಾಗ್ತಾರಾ ಎಂದು ಮಾತನಾಡಿಕೊಳ್ತಿದ್ದಾರೆ ಫ್ಯಾನ್ಸ್.






