ಜನಮನ

ಎಲ್‌ಪಿಜಿ ಸಿಲಿಂಡರ್ ದರ ಏರಿಕೆ

Views: 90

ಕನ್ನಡ ಕರಾವಳಿ ಸುದ್ದಿ ಪ್ರತಿ ತಿಂಗಳು ವಾಣಿಜ್ಯ ಸಿಲಿಂಡರ್ ದರವನ್ನು ಏರಿಕೆ ಮಾಡಲಾಗುತ್ತದೆ. ಅದರಂತೆಯೇ ಈಗಾಗಲೇ ಏಪ್ರಿಲ್‌ 1ರಂದು ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಗೃಹ ಬಳಕೆ ಅಡುಗೆ ಅನಿಲದ ಸಿಲಿಂಡರ್ ಬೆಲೆಯನ್ನೂ ಏರಿಕೆ ಮಾಡಿ ಜನರಿಗೆ ಶಾಕ್‌ ನೀಡಿದೆ.

14.2 ಕಿಲೋ ಎಲ್ಪಿಜಿ ಬೆಲೆಯನ್ನು ಸಿಲಿಂಡರ್ಗೆ 50 ರೂಪಾಯಿನಷ್ಟು ಹೆಚ್ಚಳ ಮಾಡಿದೆ. ಇದರಿಂದ ಸಾಮಾನ್ಯ ಬಳಕೆದಾರರಿಗೆ ಅಷ್ಟೇ ಅಲ್ಲದೆ, ಉಜ್ವಲ ಯೋಜನೆಯ ಫಲಾನುಭವಿಗಳಿಗೂ ಈ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ತೈಲ ಕಂಪನಿಗಳು ಪ್ರತಿ ಸಿಲಿಂಡರ್‌ಗೆ 50 ರೂಪಾಯಿ ಹೆಚ್ಚಳ ಮಾಡಿವೆ ಎಂದು ಕೇಂದ್ರ ತೈಲ ಸಚಿವ ಹರ್‌ದೀಪ್ ಸಿಂಗ್ ಪುರಿ ಸೋಮವಾರ (ಏಪ್ರಿಲ್ 7) ತಿಳಿಸಿದ್ದಾರೆ. ಉಜ್ವಾಲಾ ಯೋಜನೆ ಮತ್ತು ಸಾಮಾನ್ಯ ಬಳಕೆದಾರರಿಗೂ ಈ ಬೆಲೆ ಏರಿಕೆ ಅನ್ವಯವಾಗಲದೆ ಎಂದು ಸಚಿವರು ತಿಳಿಸಿದ್ದಾರೆ.

ಉಜ್ವಾಲಾ ಯೋಜನೆಯಡಿಯಲ್ಲಿ ಬಳಕೆದಾರರಿಗೆ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಸಾಮಾನ್ಯ ಬಳಕೆದಾರರಿಗೆ 803-853 ರೂಪಾಯಿಗಳಿಗೆ ಮತ್ತು 14.2 ಕೆಜಿ ಸಿಲಿಂಡರ್‌ಗೆ 503 ರೂಪಾಯಿಗಳಿಂದ 553 ರೂಪಾಯಿಗಳಿಗೆ ಏರಿಕೆ ಆದಂತಾಗಲಿದೆ.

ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಬ್ಸಿಡಿ ದರದಲ್ಲಿ ಎಲ್ಪಿಜಿ ಸಿಗುತ್ತದೆ. ಆದರೂ ಅವರಿಗೂ ಕೂಡ 50 ರೂಪಾಯಿ ಏರಿಕೆ ಆಗಿದೆ. 503 ರೂಪಾಯಿ ಇದ್ದ ಬೆಲೆಯನ್ನು 553 ರೂಪಾಯಿಗೆ ಹೆಚ್ಚಳ ಆಗುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದ ಬೆನ್ನಲ್ಲೇ ಜನಸಾಮಾನ್ಯರಿಗೆ ಎಲ್ಪಿಜಿ ಶಾಕ್ ನೀಡಿದೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 2 ರೂಪಾಯಿಗಳಷ್ಟು ಹೆಚ್ಚಳ ಮಾಡಲಾಗಿದೆ. ಜೊಯೆಗೆ ಮುಂದಿನ ದಿನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕೂಡ ಹೆಚ್ಚಳ ಆಗಲಿದೆ ಎನ್ನಲಾಗುತ್ತಿದೆ. ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಶೀಘ್ರವೇ ಹೆಚ್ಚಳ ಆಗುವ ಸಾಧ್ಯತೆ ಇದ್ದು, ವಾಹನ ಸವಾರರಿಗೆ ದರ ಏರಿಕೆ ಬಿಸಿ ತಟ್ಟಲಿದೆ.

Related Articles

Back to top button