ಆರೋಗ್ಯ

ಎಪಿಎಲ್ ಕಾರ್ಡ್ ಇದ್ದವರಿಗೆ ಸರ್ಕಾರ ಶಾಕ್..!  ..ಏನಿದು?

Views: 23

ರಾಜ್ಯದಲ್ಲಿರುವ ಸುಮಾರು 24 ಲಕ್ಷ ಎಪಿಎಲ್ ಕಾರ್ಡ್ ದಾರರಿಗೆ ಸರ್ಕಾರ ಈಗ ಶಾಕ್ ನೀಡಿದೆ. ಆದರೆ ಎಪಿಎಲ್ ಕಾರ್ಡ್ ಹೊಂದಿರುವ ಶೇಕಡ 80ರಷ್ಟು ಜನ ಪಡಿತರ ವಸ್ತುಗಳನ್ನು ಪಡೆದುಕೊಳ್ಳುತ್ತಿಲ್ಲ, ಇದಕ್ಕಾಗಿ ಸರ್ಕಾರ ಹೊಸ ಉಪಕ್ರಮ ಕೈಗೊಳ್ಳಲು ಮುಂದಾಗಿದ್ದು ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಎಚ್ಚರಿಕೆಯ ಸಂದೇಶ ನೀಡಿದೆ.

ದೇಶದಲ್ಲಿ ಹಸಿವನ್ನು ಹೋಗಲಾಡಿಸಲು ಬಡತನ ರೇಖೆಗಿಂತ ಕೆಳಗಿರುವವರಿಗೆ ಪ್ರಯೋಜನವಾಗಲು ಸರ್ಕಾರ ಅಂತವರಿಗೆ ಬಿಪಿಎಲ್ ಕಾರ್ಡ್ ವಿತರಣೆ ಮಾಡಿದೆ.

ಅದೇ ರೀತಿ ಎಪಿಎಲ್ ಕಾರ್ಡ್ ಹೊಂದಿರುವವರಿಗೂ ಕೂಡ ಪಡಿತರ ಸಿಗುತ್ತದೆ,  ರಿಯಾಯಿತಿ ಬೆಲೆಯಲ್ಲಿ ಪಡಿತರ ಪಡೆದುಕೊಳ್ಳಲು ಸಾಧ್ಯವಿದೆ.

ಆದರೆ, ಇಲ್ಲಿಯವರೆಗೆ ಸರ್ಕಾರ ನೀಡಿರುವ ವರದಿಯ ಪ್ರಕಾರ ಶೇಕಡ 80ರಷ್ಟು ಜನ ಎಪಿಎಲ್ ಕಾರ್ಡ್ ಹೊಂದಿದ್ದು ಕೇವಲ ಗುರುತಿಗಾಗಿಯೇ ಹೊರತು ಪಡಿತರ ಪಡೆದುಕೊಳ್ಳುವುದಕ್ಕಲ್ಲ ಎಂದು ತಿಳಿದುಬಂದಿದೆ.

ಸದ್ಯ ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಸರ್ಕಾರ ವಾರ್ನಿಂಗ್ ನೀಡಿದ್ದು ಇನ್ನು ಮುಂದೆ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವವರು ಎಪಿಎಲ್ ಕಾರ್ಡ್ ಪಡೆದುಕೊಳ್ಳಲು ಬಯಸುವವರು ತಾವು ಈ ಕಾರ್ಡ್ ಪಡೆದುಕೊಳ್ಳುತ್ತಿರುವುದು ಕೇವಲ ಗುರುತಿಗಾಗಿಯೇ ಅಥವಾ ಪಡಿತರ ಪಡೆದುಕೊಳ್ಳುವುದಕ್ಕಾಗಿಯೇ ಎಂಬುದನ್ನು ಅರ್ಜಿಯಲ್ಲಿ  ಸ್ಪಷ್ಟವಾಗಿ ನಮೂದಿಸಬೇಕು.

ಇದರ ಆಧಾರದ ಮೇಲೆ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಖರ್ಚು ಮಾಡುವ ಪಡಿತರ ವೆಚ್ಚವನ್ನು ಉಳಿಸಿ ಅದೇ ಹಣವನ್ನು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಹೆಚ್ಚಿನ ಪಡಿತರ ಪ್ರಯೋಜನ ನೀಡಲು ಸರ್ಕಾರ ನಿರ್ಧರಿಸಿದೆ. ಹಾಗಾಗಿ ಇನ್ನು ಮುಂದೆ ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಪಡಿತರ ಪಡೆದುಕೊಳ್ಳಲು ಸಾಧ್ಯವಾಗುವುದೇ ಇಲ್ಲ.

Related Articles

Back to top button