ಇತರೆ
ಉಸಿರುಗಟ್ಟಿಸಿ ಪ್ರೇಯಸಿ ಹತ್ಯೆ: ನೇಣು ಬಿಗಿಯಲು ಯತ್ನಿಸಿ ಪರಾರಿಯಾದ ಪ್ರಿಯಕರ

Views: 0
ಪ್ರೇಯಸಿ ಜೊತೆ ವೈಮನಸ್ಸು ಉಂಟಾಗಿ, ನಂತರ ಜಗಳವಾಡಿ ಬಿದ್ಯಾಸರ್ (23) ಎಂಬುವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಪ್ರಿಯಕರ ಪರಾರಿಯಾದ ಘಟನೆ ಬೆಂಗಳೂರಿನ ಕೋಡಿಹಳ್ಳಿಯ ಅಪಾಟ್೯ಮೆಂಟ್ ನಲ್ಲಿ ನಡೆದಿದೆ.
ಆಕಾಂಕ್ಷ ಉದ್ಯೋಗ ಹುಡುಕಿಕೊಂಡು ಬೆಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗಕ್ಕೆ ಸೇರಿದ್ದ. ಬಿದ್ಯಾಸರ್ ಅದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಳು. ಸಹೋದ್ಯೋಗಿಗಳಾಗಿದ್ದ ಇಬ್ಬರ ನಡುವೆ ಪ್ರೇಮಾಂಕುರ ಆಗಿ, ಅಪಾಟ್೯ಮೆಂಟ್ ನಲ್ಲಿ ವಾಸವಾಗಿದ್ದ ಪ್ರೇಯಸಿಯನ್ನು ಆಗಾಗ ಬೇಟಿ ನೀಡುತ್ತಿದ್ದ, ಪ್ರಿಯಕರ ಮತ್ತು ಪ್ರೇಯಸಿಯ ನಡುವೆ ಜಗಳ ವಿಕೋಪಕ್ಕೆ ಹೋಗಿ ಪ್ರಿಯಕರ ಪ್ರೇಯಸಿಯ ಮೇಲೆ ಹಲ್ಲೆ ಮಾಡಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದು, ನಂತರ ಮೃತದೇಹದ ಕುತ್ತಿಗೆಗೆ ಬಟ್ಟೆ ಕಟ್ಟಿದ ಆರೋಪಿ ಪ್ಯಾನಿಗೆ ನೇಣು ಬಿಗಿಯಲು ಯತ್ನಿಸಿ ವಿಫಲವಾದಾಗ ಮೃತದೇಹವನ್ನು ನೆಲದಲ್ಲಿಯೇ ಮಲಗಿಸಿ ಪರಾರಿಯಾದ ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.






