ಕರಾವಳಿ

ಉಡುಪಿ ಸೀರೆ ಗ್ರಾಹಕರಿಗೆ ತಲುಪಿದಲ್ಲಿ ಬೇಡಿಕೆ ಖಂಡಿತ: ಆರ್ಥಿಕ ತಜ್ಞ ಜಗದೀಶ್ ಶೆಟ್ಟಿಗಾರ್

Views: 0

ಉಡುಪಿ:ಮಾರುಕಟ್ಟೆಯಲ್ಲಿ ಯಾವುದೇ ವಸ್ತುಗಳ ಮಾರಾಟವನ್ನು ಗ್ರಾಹಕರು ನಿರ್ಧಾರ ಮಾಡುತ್ತಾರೆ, ಗ್ರಾಹಕರಿಗೆ ಆ ವಸ್ತುವಿನ ಗುಣಮಟ್ಟ, ಬೆಲೆ, ವಿಶ್ವಾಸಾರ್ಹತೆಯ ಬಗ್ಗೆ ಸರಿಯಾದ ಮಾಹಿತಿ ಇದ್ದಾಗ ಮಾತ್ರ ಕೊಳ್ಳುತ್ತಾರೆ. ಇದನ್ನು ಅರ್ಥ ಮಾಡಿಕೊಂಡು ಉಡುಪಿ ಸೀರೆಯ ನೇಕಾರರು ಮತ್ತು ವ್ಯಾಪಾರಸ್ಥರು ಗ್ರಾಹಕರನ್ನು ಸೆಳೆಯಬೇಕು ಎಂದು ಆರ್ಥಿಕ ತಜ್ಞ ಡಾಕ್ಟರ್ ಜಗದೀಶ್ ಶೆಟ್ಟಿಗಾರ್ ಹೇಳಿದರು.

ಅವರು ಉಡುಪಿ ಪೂರ್ಣಪ್ರಜ್ಞಾ ಸಭಾಂಗಣದಲ್ಲಿ ಪದ್ಮಶಾಲಿ ನೇಕಾರರ ಪ್ರತಿಷ್ಠಾನ ಮತ್ತು ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಆಶ್ರಯದಲ್ಲಿ ನಡೆಯುತ್ತಿರುವ ಕೈಮಗ್ಗ ಸೀರೆಗಳ ಉತ್ಸವ ಅಂಗವಾಗಿ ಕೈಮಗ್ಗ ಸೀರೆಗಳ ಸೌಂದರ್ಯ ಸ್ಪರ್ಧೆ ಮತ್ತು ಬ್ರಾಂಡ್ ಅಂಬಾಸಿಡರ್ ಗಳ ಆಯ್ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಡುಪಿ ಸೀರೆಗಳಿಗೆ ಬೇಡಿಕೆ ಇಲ್ಲ ಎಂದು ಹೇಳಲಾಗುತ್ತಿದೆ. ಅದೇ ಕಾರಣಕ್ಕೆ ಈ ಭಾಗದಲ್ಲಿ ಕೈಮಗ್ಗ ನೇಕಾರಿಕೆ ಅಳಿವಿನಂಚಿಗೆ ಬಂದಿದೆ. ಬೇರೆ ಯಾವುದೇ ನೇಕಾರಿಕೆ ಶೈಲಿಗೆ ಸಿಗದ ಭೌಗೋಳಿಕ ಮಾನ್ಯತೆ ಉಡುಪಿ ಸೀರೆ ಶೈಲಿಯ ನೇಕಾರಿಕೆಗೆ ಸಿಕ್ಕಿದೆ.ಆದರೆ ಈ ಮಾಹಿತಿ ಗ್ರಾಹಕರಿಗೆ ತಲುಪಿಲ್ಲ. ಈ ಮಾಹಿತಿ ಗ್ರಾಹಕರಿಗೆ ಸಿಕ್ಕಿದರೆ ಉಡುಪಿ ಸೀರೆಗಳಿಗೆ ಬೇಡಿಕೆ ಖಂಡಿತ ಬರುತ್ತದೆ ಎಂದು ಹೇಳಿದರು.

ಉಡುಪಿ ಶಾಸಕ ಯಶಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್, ಉದ್ಯಮಿಗಳಾದ ಕುಯಿಲಾಡಿ ಸುರೇಶ್ ನಾಯಕ್, ಉದಯ್ ಕುಮಾರ್ ಶೆಟ್ಟಿ, ನ್ಯಾಯಮಾದಿ ರತ್ನಾಕರ ಹೆಗ್ಡೆ, ನಟಿ ರೂಪಶ್ರೀ, ಪವರ್ ಲೂಮ್ ಅಧ್ಯಕ್ಷೆ ಸುವರ್ಷ ಮಿಂಜ್, ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ, ಉಡುಪಿ ನೇಕಾರ ಪ್ರತಿಷ್ಠಾನದ ಅಧ್ಯಕ್ಷ ರತ್ನಾಕರ ಇಂದ್ರಾಳಿ, ಆಯೋಜನಾ ಸಮಿತಿ ಅಧ್ಯಕ್ಷ ಮಂಜುನಾಥ ಇಂದ್ರಾಳಿ ಇನ್ನಿತರರು ಉಪಸ್ಥಿತರಿದ್ದರು.

ಪ್ರತಿಷ್ಠಾನದ ಉಪಾಧ್ಯಕ್ಷ ದತ್ತರಾಜ್ ಶೆಟ್ಟಿಗಾರ್ ಕೊಯ್ಲಾ ಸ್ವಾಗತಿಸಿದರು. ಸರೋಜಾ ಯಶವಂತ ಶೆಟ್ಟಿಗಾರ ವಂದಿಸಿದರು.

Related Articles

Back to top button