ಕರಾವಳಿ

ಉಡುಪಿ ಮಲ್ಪೆ ಬೀಚ್ ನಲ್ಲಿ ದಡಕ್ಕೆ ಸೇರಿದ ಮೀನುಗಳ ರಾಶಿ

Views: 0

ಉಡುಪಿ ಮಲ್ಪೆ ಸಮೀಪದ ಬಡ ನಿಡಿಯೂರು ತೊಟ್ಟಂ ಕದಿಕೆ ಭಾಗದ ಬೀಚಿನಲ್ಲಿ ರಾಶಿ ರಾಶಿ ಬೂತಾಯಿ ಮೀನುಗಳು ಬಂದು ದಡದ ಮೇಲೆ ಬಿದ್ದಿದೆ.

ಕಡಲ ತೀರಕ್ಕೆ ಪಶ್ಚಿಮದಿಂದ ಪೂರ್ವದ ಕಡೆಗೆ ಸಾಗಿ ಬಂದ ಅಲೆಗಳೊಂದಿಗೆ ತೀರಕ್ಕೆ ರಾಶಿ ರಾಶಿ ಮೀನುಗಳು ಅಪ್ಪಳಿಸಿತು.

ಜನರು ಮನೆಯಿಂದ ಬುಟ್ಟಿ, ಚೀಲ, ಪಾತ್ರೆ ,ಪ್ಲಾಸ್ಟಿಕ್ ಕವರ್ ಹಿಡಿದು ಬಂದು ನಾ ಮುಂದು ತಾ ಮುಂದು ಅಂತ ಬೀಚಿನಲ್ಲಿ ಬಿದ್ದಿದ್ದ ಮೀನುಗಳನ್ನು ತುಂಬಿ ಮನೆಗೆ ಕೊಂಡೊಯ್ದಿದ್ದಾರೆ.

ಉಡುಪಿಯ ಮಲ್ಪೆ ಸಮೀಪದ ತೊಟ್ಟಂ ಪರಿಸರದಲ್ಲಿ ಈ ರೀತಿ ಮೀನು ರಾಶಿಯಾಗಿ ಬಂದು ಬಿದ್ದಿದ್ದು ಇದೇ ಮೊದಲ ಬಾರಿಗೆ ಎಂದು ಸ್ಥಳೀಯರು ಹೇಳಿದ್ದಾರೆ.

ಸಾಮಾನ್ಯವಾಗಿ ಸಮುದ್ರದಲ್ಲಿ ದೋಣಿಗಳು ಮಸ್ಸ್ಯ ಬೇಟೆಗೆ ಬಲೆ ಬೀಸಿದ್ದು,ಎಂಜಿನ್ ಶಬ್ದ ಹಾಗೂ ಬಲೆ ಬೀಸುವುದನ್ನು ತಪ್ಪಿಸಿಕೊಳ್ಳಲು ಮೀನುಗಳು ಸಮುದ್ರದ ತೀರಕ್ಕೆ ಬಂದಿವೆ ಎಂದು ಮೀನುಗಾರರು ಹೇಳಿದ್ದಾರೆ.

Related Articles

Back to top button