ಕರಾವಳಿ

ಉಡುಪಿ ಮನೆಗೆ ನುಗ್ಗಿ 73,06,800 ರೂ. ಮೌಲ್ಯದ ಚಿನ್ನಾಭರಣ ಕಳವು

Views: 0

ಉಡುಪಿ: ಶಿವಳ್ಳಿ ಗ್ರಾಮದಲ್ಲಿ ಮನೆಯ ಮುಂಬಾಗಿಲಿನ ಮತ್ತು ಮಾಸ್ಟರ್ ಬೆಡ್ ರೂಮ್‌ನ ಬಾಗಿಲು ಮುರಿದು ಒಳಪ್ರವೇಶಿಸಿದ್ದ ಖದೀಮರು ಅಲ್ಮೇರಾದಲ್ಲಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕದ್ದುಕೊಂಡು ಹೋಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಶಿವಳ್ಳಿ ಗ್ರಾಮದ ಲಾಲಾಲಜಪತ್ ರಾಯ್ ಮಾರ್ಗದ 4 ನೇ ಅಡ್ಡರಸ್ತೆಯಲ್ಲಿರುವ ಅಮ್ಮುಂಜೆ ವಿಟ್ಠಲ್‌ದಾಸ್ ನಾಯಕ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಅ. 8 ರ ಮಧ್ಯಾವಧಿಯಲ್ಲಿ ಕೃತ್ಯ ಎಸಗಲಾಗಿದೆ.

ಮನೆಯ ಮುಂಬಾಗಿಲಿನ ಮತ್ತು ಮಾಸ್ಟರ್ ಬೆಡ್ ರೂಮ್‌ನ ಬಾಗಿಲುಗಳ ಬೀಗ ಮುರಿದು ಅಲ್ಮೇರಾಗಳ ಬೀಗಳನ್ನು ತೆರೆದು ಅದರಲ್ಲಿದ್ದ 1,882 ಗ್ರಾಂ. ತೂಕದ ಸುಮಾರು 66,36,300 ರೂ. ಮೌಲ್ಯದ ಚಿನ್ನಾಭರಣಗಳನ್ನು ಹಾಗೂ 7,450 ಗ್ರಾಂ. ತೂಕದ 6,70,500 ರೂ. ಮೌಲ್ಯದ ಬೆಳ್ಳಿಯ ಸೊತ್ತುಗಳನ್ನು ಕಳವು ಮಾಡಿದ್ದಾರೆ. ಕಳವಾಗಿರುವ ಸೊತ್ತುಗಳ ಒಟ್ಟು ಮೌಲ್ಯದ 73,06,800 ರೂ. ಆಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

Related Articles

Back to top button