ಕರಾವಳಿ

ಉಡುಪಿ ಪ್ರತ್ಯೇಕ ಪ್ರಕರಣ: ಬ್ರಹ್ಮಾವರ,ಕಾರ್ಕಳ, ಕುಂದಾಪುರದಲ್ಲಿ ಮೂವರು ಆತ್ಮಹತ್ಯೆ

Views: 0

ಬ್ರಹ್ಮಾವರ/ ಕಾರ್ಕಳ /ಕುಂದಾಪುರ: ಸಾಂಸಾರಿಕ ಕಾರಣದಿಂದ ಮನನೊಂದು ಬ್ರಹ್ಮಾವರ ಸಮೀಪದ  ಕೆಂಜೂರು ಗ್ರಾಮದ ಮಹಾಬಲ ನಾಯಕ್ ( 46) ಎಂಬುವವರು ಮನೆಯ ಸಮೀಪ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾರ್ಕಳದ ನಿಟ್ಟೆ ಗ್ರಾಮದ ಅತ್ತೂರು ನಾರ್ತ್ ಚೇತನಹಳ್ಳಿ ನಿವಾಸಿ ಚಂದ್ರಕಾಂತ್ (30) ರಾತ್ರಿ ವೇಳೆ ಮನೆಯ ಸಮೀಪದ ಹಾಡಿಯಲ್ಲಿ  ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮದ ನಿವಾಸಿ ವಿಜಯ (44) ಎಂಬುವವರು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಮಲಗುವ ಕೋಣೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಪ್ರತ್ಯೇಕ ಪ್ರಕರಣದಲ್ಲಿ ಬ್ರಹ್ಮಾವರ, ಕಾರ್ಕಳ, ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button