ಕರಾವಳಿ

ಉಡುಪಿ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ : ಕೊಲೆ ಮಾಡೋ ಮುಂಚೆ ಎರಡು ಬೈಕ್ ಬದಲಿಸಿರುವ ಆರೋಪಿ ಪ್ರವೀಣ್‌ಗೆ ಲಿಫ್ಟ್ ಕೊಟ್ಟಿದ್ದು ಯಾರು? 

Views: 0

ಉಡುಪಿ: ಒಂದೇ ಮನೆಯಲ್ಲಿ ನಾಲ್ವರ ಹತ್ಯಾಕಾಂಡ ನಡೆದಿದ್ದ ರಕ್ತಪಾತ ಇನ್ನೂ ಬೆಚ್ಚಿ ಬೀಳುವಂತಿದೆ. ಗಗನಸಖಿ ಅಯ್ನಾಸ್‌ಳನ್ನು ಬರ್ಬರವಾಗಿ ಹತ್ಯೆ ಮಾಡಿದ ಕಿರಾತಕನ ಕ್ರೌರ್ಯ ಬಗೆದಷ್ಟು ಬಯಲಾಗ್ತಿದೆ. ಸದ್ಯ ಮಲ್ಪೆ ಪೊಲೀಸರ ವಶದಲ್ಲಿರುವ ಆರೋಪಿ ಪ್ರವೀಣ ಚೌಗಲೆಯ ಬಗ್ಗೆ ಎಲ್ಲಾ ಸಾಕ್ಷಿಗಳನ್ನು ಕಲೆ ಹಾಕುತ್ತಿದ್ದಾರೆ.

ಇದರ ಬೆನ್ನಲ್ಲೇ ಮಲ್ಪೆ ಪೊಲೀಸರಿಗೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಆರೋಪಿ ಪ್ರವೀಣ ಚೌಗಲೆಯನ್ನು ವ್ಯಕ್ತಿಯೊಬ್ಬ ಬೈಕ್​ನಲ್ಲಿ ಲಿಫ್ಟ್ ಕೊಟ್ಟಿದ್ದಾನೆ. ಆ ಫೋಟೋವನ್ನು ಆಧಾರವಾಗಿ ಇಟ್ಟುಕೊಂಡು ಲಿಫ್ಟ್ ಕೊಟ್ಟ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇನ್ನು ಪೊಲೀಸರ ಮುಂದೆ ಆರೋಪಿ ಒಂದೊಂದಾಗಿ ಸ್ಫೋಟಕ ಸಂಗತಿಗಳನ್ನ ಬಾಯ್ಬಿಡುತ್ತಿದ್ದಾನೆ.

ಗಗನಸಖಿ ಅಯ್ನಾಸ್‌ಳನ್ನು ಕೊಲೆ ಮಾಡಲು ಕಾರಣವೇನು?

ಆರೋಪಿ ಪ್ರವೀಣ ಚೌಗಲೆ ಏರ್‌ ಇಂಡಿಯಾ ವಿಮಾನದಲ್ಲಿ ಕ್ಯಾಬಿನ್ ಕ್ರ್ಯೂ ಆಗಿ ಕೆಲಸ ಮಾಡುತ್ತಿದ್ದ. ಕ್ಯಾಬಿನ್ ಕ್ರ್ಯೂ ಅಂದ್ರೆ ವಿಮಾನ ಹತ್ತಿದ ಮೇಲೆ ಪ್ರಯಾಣಿಕರು ವಿವರಣೆ ನೀಡೋ ಕಾರ್ಯ. ಇದೇ ವಿಮಾನದಲ್ಲಿ ಸಹೋದ್ಯೋಗಿಯಾಗಿದ್ದು ಗಗನಸಖಿ ಅಯ್ನಾಸ್‌. ಅಯ್ನಾಸ್‌ ಅಂದ್ರೆ ಪ್ರವೀಣ್ ಅದೆಷ್ಟು ಇಷ್ಟ ಪಡುತ್ತಿದ್ದ ಅಂದ್ರೆ, ಅಯ್ನಾಸ್ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಪ್ರವೀಣ್ ಚೌಗಲೆ ಹುಚ್ಚನಂತಾಗಿದ್ದ. ಹೀಗಾಗಿ ಹಂತಕ ಪ್ರವೀಣ ಚೌಗಲೆ ಗಗನಸಖಿ ಅಯ್ನಾಸ್‌ಳನ್ನು ಕೊಲೆ ಮಾಡಲು ನಿರ್ಧರಿಸಿಯೇ ಉಡುಪಿಗೆ ಬಂದಿದ್ದ. ಏರ್ ಇಂಡಿಯಾ ವಿಮಾನದಲ್ಲಿ ಜೊತೆ, ಜೊತೆಯಾಗಿ ಹಾರಾಡುತ್ತಿದ್ದ ಇವರಿಬ್ಬರ ಮಧ್ಯೆ ಪರಿಚಯವಾಗಿತ್ತು. ಪರಿಚಯ, ಸ್ನೇಹದಿಂದ ಇಬ್ಬರ ಮಧ್ಯೆ ಸಲುಗೆಯೂ ಬೆಳೆದಿತ್ತು. ಈಗಾಗಲೇ ಮದುವೆಯಾಗಿದ್ದ ಪ್ರವೀಣ ಚೌಗಲೆಗೆ ಗಗನಸಖಿ ಅಯ್ನಾಸ್‌ಳ ಮೇಲಿದ್ದ ಮೋಹವೇ ಈ ಕೊಲೆಗೆ ಕಾರಣ ಎಂದು ತನಿಖೆ ಮೂಲಕ ತಿಳಿದು ಬಂದಿದೆ.

ಅಯ್ನಾಸ್ ತನ್ನಿಂದ ದೂರ ಮಾಡಿದ್ದಕ್ಕೆ ಕೋಪಗೊಂಡ ಪ್ರವೀಣ್ ಕೊಲೆ ಮಾಡಲು ನಿರ್ಧರಿಸಿದ್ದ. ಈತನ ಉದ್ದೇಶ ಅಯ್ನಾಸ್ ಒಬ್ಬಳನ್ನೇ ಕೊಲೆ ಮಾಡುವುದಾಗಿತ್ತು. ಆದರೆ, ಸಾಕ್ಷ್ಯ ನಾಶದ ಕಾರಣಕ್ಕೆ ಅಯ್ನಾಸ್ ಜೊತೆಗಿದ್ದ ಅಮ್ಮ, ತಮ್ಮ, ತಂಗಿಯನ್ನು ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಪ್ರವೀಣ್ ಓಡಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದಿಷ್ಟೇ ಅಲ್ಲದೇ ಎಲ್ಲಾ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿ ಉಡುಪಿ ಪೊಲೀಸರು ಪ್ರವೀಣನನ್ನು ಅರೆಸ್ಟ್​ ಮಾಡಿದ್ದಾರೆ. ಕೊಲೆ ಮಾಡೋ ಮುಂಚೆ ಎರಡು ಬೈಕ್ ಬದಲಿಸಿರುವ ಆರೋಪಿ ಪ್ರವೀಣ್‌ಗೆ ಲಿಫ್ಟ್ ಕೊಟ್ಟಿದ್ದು ಯಾರು? ಮತ್ತು ಯಾಕೆ ಅನ್ನೋ ಅನುಮಾನಗಳು ಪೊಲೀಸರಿಗೆ ಕಾಡುತ್ತಿದೆ.

Related Articles

Back to top button