ಸಾಂಸ್ಕೃತಿಕ

ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ ನೆಲಭೋಜನ ಹರಕೆ ತೀರಿಸಿದ ವಸಿಷ್ಠ ಸಿಂಹ, ಹರಿಪ್ರಿಯಾ ದಂಪತಿ

Views: 1

ಬೆಂಗಳೂರು: ಸ್ಯಾಂಡಲ್​​ವುಡ್​​ನ ಕ್ಯೂಟ್​​ ಕಪಲ್​​ ವಸಿಷ್ಠ ಸಿಂಹ, ಹರಿಪ್ರಿಯಾ ಉಡುಪಿ ಕೃಷ್ಣ ಮಠಕ್ಕೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ನೆಲದ ಮೇಲೆ ಊಟ ಮಾಡಿ ನೆಲಭೋಜನ ಹರಕೆಯ ಸೇವೆಯನ್ನು ತೀರಿಸಿದ್ದಾರೆ. ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ ನೆಲಭೋಜನ ಹರಕೆ ತೀರಿಸಿದ ವಸಿಷ್ಠ ಸಿಂಹ, ಹರಿಪ್ರಿಯಾ ದಂಪತಿ

ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜನವರಿ 26ರಂದು ಗಣರಾಜ್ಯ ದಿನದಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ಇಬ್ಬರ ಮದುವೆ ಸಮಾರಂಭ ನಡೆದಿತ್ತು. ಇಬ್ಬರು ಸರಳವಾಗಿ ಹಸೆಮಣೆ ಏರಿದ್ದರು.

ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ ನೆಲಭೋಜನ ಹರಕೆ ತೀರಿಸಿದ ವಸಿಷ್ಠ ಸಿಂಹ, ಹರಿಪ್ರಿಯಾ ದಂಪತಿ

ಇದೀಗ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದಂಪತಿ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ನೆಲಭೋಜನ ಹರಕೆಯನ್ನು ತೀರಿಸಿದ್ದಾರೆ.

ಉಡುಪಿ ಕೃಷ್ಣ ಮಠಕ್ಕೆ ಆಗಮಿಸಿದ ವಸಿಷ್ಠ ಸಿಂಹ, ಹರಿಪ್ರಿಯಾ ದಂಪತಿ ಕೃಷ್ಣದರ್ಶನ ಪಡೆದಿದ್ದಾರೆ. ಮುಖ್ಯಪ್ರಾಣದೇವರ ಸನ್ನಿಧಿಯಲ್ಲಿ ನೆಲಭೋಜನ ಹರಕೆಯ ಸೇವೆಯನ್ನು ತೀರಿಸಿದರು. ಕಲಾವಿದ ಮಧೂರು ನಾರಾಯಣ ಶರಳಾಯ ಉಪಸ್ಥಿತರಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

Related Articles

Back to top button
error: Content is protected !!