ಮಾಹಿತಿ ತಂತ್ರಜ್ಞಾನ

ಇನ್ಸ್ಟಾಗ್ರಾಮ್ ಪ್ರೀತಿ ಗಂಡ, ಮಕ್ಕಳ ಬಿಟ್ಟು ಹೋದ ಪತ್ನಿ!

Views: 60

ಕನ್ನಡ ಕರಾವಳಿ ಸುದ್ದಿ:  ಇನ್ಸ್ಟಾಗ್ರಾಮ್ ಪ್ರೀತಿ ಯಿಂದ ಸಂಸಾರವೇ ಮುರಿದು ಹೋಗಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ಮಹಿಳೆ  ಇನ್ಸ್ಟಾಗ್ರಾಮ್  ಪರಿಚಿತನಾದ ಯುವಕನೊಂದಿಗೆ ಮದುವೆಯಾಗುವ ಸಲುವಾಗಿ ಗಂಡ ಹಾಗೂ ಮಕ್ಕಳನ್ನು ತೊರೆದು ಹೋಗಿರುವ ಪ್ರಕರಣ ನಡೆದಿದೆ.

ನೇತ್ರಾವತಿ 13 ವರ್ಷಗಳ ಹಿಂದೆ ರಮೇಶ್ ಎಂಬ ಚಾಲಕನನ್ನು ವಿವಾಹವಾಗಿದ್ದಳು. ಮದುವೆಯಾದ ನಂತರ ಮಕ್ಕಳ ಸರಳ ಜೀವನ ನಡೆಸುತ್ತಿದ್ದರು. ಆದರೆ ರಮೇಶ್ ಡ್ರೈವರ್ ಆದ ಕಾರಣದಿಂದಾಗಿ ಹೆಚ್ಚು ಸಮಯ ಮನೆಯ ಹೊರಗೇ ಕಳೆದಿದ್ದನು. ಈ ಮಧ್ಯೆ, ನೇತ್ರಾವತಿ ಹೊಸ ಮೊಬೈಲ್ ಖರೀದಿಸಿ ಇನ್ಸ್ಟಾಗ್ರಾಮ್ ಖಾತೆ ತೆರೆದು ರೀಲ್ಸ್ ಮಾಡಲು ಮುಂದಾಗಿದ್ದಳು. ರೀಲ್ಸ್ ಮಾಡುತ್ತಿದ್ದ ನೇತ್ರಾವತಿ, ಜನರ ಗಮನ ಸಳೆಯ ತೊಡಗಿದಳು. ನಂತರ ಹಲವು ಜನರಿಂದ ಮೆಸೇಜ್ಗಳು ಬರಲಾರಂಭಿಸಿದವು. ಇದೇ ಸಂದರ್ಭದಲ್ಲಿ ಸಂತೋಷ್ ಎಂಬ ಯುವಕನೊಂದಿಗೆ ಪರಿಚಯವಾಗಿದ್ದು, ಪರಿಚಯದಿಂದ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು.

ಸಂತೋಷ್ ಜತೆ ಕೇವಲ ಒಂದು ವಾರದ ಪರಿಚಯದ ಬಳಿಕ ನೇತ್ರಾವತಿ ತನ್ನ ಗಂಡ ರಮೇಶ್ ಮಕ್ಕಳನ್ನು ಬಿಟ್ಟು ಹೋಗಿದ್ದಳು. ಮನೆಯವರಿಗೆ ಈ ಕುರಿತು ಯಾವುದೇ ಸುಳಿವು ಇರಲಿಲ್ಲ. ಇನ್ಸ್ಟಾಗ್ರಾಮ್ ಆ ಯುವಕನ ಜತೆ ಪ್ರೀತಿ ಬೆಳೆದ ನಂತರ, ಅವರು ವಿವಾಹವಾದ ವಿಡಿಯೋವನ್ನೇ ಮಾಡಿದ್ದಾಳೆ. ಇನ್ಸ್ಟಾಗ್ರಾಮ್ ರೀಲ್ಡ್ ನೋಡಿದ ಗಂಡ ಫುಲ್ ಶಾಕ್ ಆಗಿದ್ದಾನೆ. ಬಳಿಕ ರಮೇಶ್ ತಕ್ಷಣವೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಮದುವೆಯಾದ ಕೆಲ ದಿನಗಳ ನಂತರ ನೇತ್ರಾವತಿ, ತನ್ನ ಹಳೆಯ ಮನೆಗೆ ಬಟ್ಟೆ ಹಾಗೂ ಆಭರಣಗಳನ್ನು ತೆಗೆದುಕೊಳ್ಳಲು ಪೊಲೀಸ್ ಭದ್ರತೆಯಲ್ಲಿ ನೇತ್ರಾವತಿ ಬಂದಿದ್ದು, ಈ ಸಂದರ್ಭದಲ್ಲಿ ಗಂಡನ ಮನೆಯವರು ಆಕೆಯನ್ನು ತರಾಟೆಗೆ ತೆಗೆದುಕೊಂಡರು. ಈ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button