ಸಾಂಸ್ಕೃತಿಕ
ಆಸ್ಕರ್‌ನಲ್ಲಿ ಮಿಂಚಿದ ಭಾರತ: RRR ನ ನಾಟು ನಾಟು ಹಾಗೂ “ದಿ ಎಲಿಫೆಂಟ್ ವಿಸ್ಪರರ್ಸ್” ಗೆ ಪ್ರಶಸ್ತಿ
Views: 0

ಭಾರತವು 95 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಎರಡು ಬೃಹತ್ ಗೆಲುವುಗಳೊಂದಿಗೆ ಆಳ್ವಿಕೆ ನಡೆಸಿತು – SS ರಾಜಮೌಳಿಯವರ RRR ಚಿತ್ರದ “ನಾಟು ನಾಟು” ಗೀತೆ “ಅತ್ಯುತ್ತಮ ಮೂಲ ಗೀತೆ” ವಿಭಾಗದಲ್ಲಿ ಗೆದ್ದಿದೆ ಮತ್ತು ಕಾರ್ತಿಕಿ ಗೊನ್ಸಾಲ್ವ್ಸ್ ಅವರ “ದಿ ಎಲಿಫೆಂಟ್ ವಿಸ್ಪರರ್ಸ್” ಚಿತ್ರ ಅತ್ಯುತ್ತಮ ಸಾಕ್ಷ್ಯ ಕಿರು ಚಿತ್ರ ವಿಭಾಗದ ಪ್ರಶಸ್ತಿಯನ್ನು ಗೆದ್ದಿದೆ. RRR ಜನವರಿಯಲ್ಲಿ ಅತ್ಯುತ್ತಮ ಮೂಲ ಗೀತೆಗಾಗಿ ಗೋಲ್ಡನ್ ಗ್ಲೋಬ್ ಅನ್ನು ಗೆದ್ದಿರುವುದನ್ನು ಇಲ್ಲಿ ಸ್ಮರಿಸಬಹುದು.
ಆಸ್ಕರ್ ಪ್ರಶಸ್ತಿಗಳಲ್ಲಿ ಇಲ್ಲಿಯವರೆಗಿನ ಭಾರತದ ಸಾಧನೆ
“ಚಲನ ಚಿತ್ರಗಳ ಕಲೆಯಲ್ಲಿ ಅವರ ಅಪರೂಪದ ಪಾಂಡಿತ್ಯ ಮತ್ತು ಪ್ರಪಂಚದಾದ್ಯಂತ ಚಲನಚಿತ್ರ ನಿರ್ಮಾಪಕರು ಮತ್ತು ಪ್ರೇಕ್ಷಕರ ಮೇಲೆ ಅಳಿಸಲಾಗದ ಪ್ರಭಾವ ಬೀರಿದ ಅವರ ಆಳವಾದ ಮಾನವೀಯ ದೃಷ್ಟಿಕೋನವನ್ನು ಗುರುತಿಸಿ” 1992 ರಲ್ಲಿ ಸತ್ಯಜಿತ್ ರೇ ಅವರಿಗೆ OSCAR ಗೌರವ ಪ್ರಶಸ್ತಿಯನ್ನು ನೀಡಲಾಗಿತ್ತು. 1983 ರಲ್ಲಿ ನಡೆದ 55 ನೇ ಆಸ್ಕರ್ ಪ್ರಶಸ್ತಿಯಲ್ಲಿ ಭಾನು ಅಥೈಯಾ ಅವರು “ಗಾಂಧಿ” ಚಿತ್ರಕ್ಕಾಗಿ “ಅತ್ಯುತ್ತಮ ವಸ್ತ್ರ ವಿನ್ಯಾಸ” ವಿಭಾಗದಲ್ಲಿ ಪಡೆದರು.
2009 ರಲ್ಲಿ ನಡೆದ 81ನೇ ಆಸ್ಕರ್ ಪ್ರಶಸ್ತಿಯಲ್ಲಿ ಭಾರತೀಯ ಚಲನಚಿತ್ರ “ಸ್ಲಮ್‌ಡಾಗ್ ಮಿಲಿಯನೇರ್” ಮೂರು ಪ್ರಶಸ್ತಿಗಳನ್ನು ಬಾಚಿತ್ತು. ರೆಸುಲ್ ಪೂಕುಟ್ಟಿ ಅವರು ಈ ಚಿತ್ರಕ್ಕಾಗಿ “ಅತ್ಯುತ್ತಮ ಧ್ವನಿ ಮಿಶ್ರಣ” ವಿಭಾಗದಲ್ಲಿ ಗುಲ್ಜಾರ್ ಪಡೆದರು. ಇದೇ ಚಿತ್ರದ ಸಂಗೀತ ‘ಜೈ ಹೋ’ ವು “ಅತ್ಯುತ್ತಮ ಮೂಲ ಗೀತೆ (ಗಾಗಿ)” ವಿಭಾಗದಲ್ಲಿ ಸ್ವೀಕರಿಸಿತು . ಅದಲ್ಲದೆ, ಇದೆ ಚಿತ್ರದಳ್ಳಿ ಎ. ಆರ್. ರೆಹಮಾನ್ ರವರ ಸಂಗೀತ “ಅತ್ಯುತ್ತಮ ಮೂಲ ಸ್ಕೋರ್” ವಿಭಾಗದಲ್ಲಿ ಪ್ರಶಸ್ತಿ ಸ್ವೀಕರಿಸಿದೆ.
2019 ರಲ್ಲಿ ನಡೆದ 91ನೇ ಆಸ್ಕರ್ ಪ್ರಶಸ್ತಿಯಲ್ಲಿ “ಅತ್ಯುತ್ತಮ ಸಾಕ್ಷ್ಯಚಿತ್ರ (ಸಣ್ಣ ವಿಷಯ)” ವಿಭಾಗದಲ್ಲಿ “Period. End of Sentence” ಚಿತ್ರಕ್ಕಾಗಿ ಗುನೀತ್ ಮೊಂಗಾ ಸ್ವೀಕರಿಸಿದ್ದರು
ಡಾ. ಶಿವಪ್ರಸಾದ್






