ಸಾಂಸ್ಕೃತಿಕ

ಆಲಿಯಾ ಕಶ್ಯಪ್ ಸುಂದರ ಕ್ಷಣದ ಬಿಕಿನಿ ಲುಕ್ ಗೆ ನೆಟ್ಟಿಗರು ಫುಲ್ ಫಿದಾ!

Views: 145

ಕನ್ನಡ ಕರಾವಳಿ ಸುದ್ದಿ: ಖ್ಯಾತ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಪುತ್ರಿ ಆಲಿಯಾ ಕಶ್ಯಪ್ ವೈಯಕ್ತಿಕ ವಿಚಾರವಾಗಿಯೂ ಸುದ್ದಿಯಲ್ಲಿರುತ್ತಾರೆ. ಸದ್ಯ ಅವರು ಸೀಶೆಲ್ಸ್‌ ಪ್ರವಾಸ ಕೈಗೊಂಡಿದ್ದು, ಅಲ್ಲಿನ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.‌ ಬಿಕಿನಿ ಧರಿಸಿ ಬೋಲ್ಡ್ ಆಗಿ ಕಾಣಿಸಿಕೊಂಡ ಆಲಿಯಾ ಫೋಟೋಸ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ.ಖ್ಯಾತ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಪುತ್ರಿ ಆಲಿಯಾ ಕಶ್ಯಪ್ ಸದ್ಯ ಸೀಶೆಲ್ಸ್ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾರೆ. ತಮ್ಮ ರಜೆಯ ಸುಂದರ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಆಲಿಯಾ ಅಭಿಮಾನಿಗಳನ್ನು ತಮ್ಮತ್ತ ಸೆಳೆದಿದ್ದಾರೆ.ಸೀಶೆಲ್ಸ್ ನ ರಮಣೀಯ ಕಡಲತೀರಗಳು ಮತ್ತು ಪೂಲ್ ಗಳಲ್ಲಿ ತೆಗೆದ ಸುಂದರ ಚಿತ್ರಗಳನ್ನು ಅವರು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಫೋಟೋಗಳಲ್ಲಿ ಅವರು ಬಿಕಿನಿ ಧರಿಸಿ, ವಿವಿಧ ಭಂಗಿಗಳಲ್ಲಿ ಫೋಸ್ ನೀಡಿದ್ದಾರೆ.“ಸೀಶೆಲ್ಸ್ ಪ್ರವಾಸ” ಎಂಬ ಶೀರ್ಷಿಕೆಯೊಂದಿಗೆ ಆಲಿಯಾ ಹಂಚಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿವೆ. ಆಲಿಯಾ ಅವರ ಫ್ಯಾಷನ್ ಸೆನ್ಸ್ ಹೆಚ್ಚು ಆ್ಯಟ್ರಾ ಕ್ಟೀವ್ ಆಗಿದ್ದು ಹಸಿರು ಬಣ್ಣದ ಬಿಕಿನಿ ಧರಿಸಿ ಸೆಕ್ಸಿ ಪೋಸ್ ಕೊಟ್ಟಿದ್ದಾರೆ.ಆಲಿಯಾ ಕಶ್ಯಪ್ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ತಮ್ಮ ವೈಯಕ್ತಿಕ ಜೀವನ ಮತ್ತು ಪ್ರವಾಸಗಳ ಕುರಿತು ಆಗಾಗ್ಗೆ ಅಪ್ ಡೇಟ್ ಹಂಚಿಕೊಳ್ಳುತ್ತಾರೆ. ಸೀಶೆಲ್ಸ್ ಟ್ರಿಪ್ ಫೋಟೋಗೂ ಸಾವಿರಾರು ಲೈಕ್ಸ್ ಮತ್ತು ಕಾಮೆಂಟ್ ಪಡೆದುಕೊಂಡಿದೆ.

ಆಲಿಯಾ ಕಶ್ಯಪ್ ಅವರು ಮುಖ್ಯವಾಗಿ ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಮತ್ತು ಯೂಟ್ಯೂಬರ್ ಆಗಿ ಗುರುತಿಸಿಕೊಂಡಿದ್ದಾರೆ. ಲೈಫ್ ಸ್ಟೈಲ್, ಫ್ಯಾಷನ್, ಬ್ಯೂಟಿ ಸೆನ್ಸ್ ವಿಡಿಯೊ ಹಂಚಿಕೊಳ್ಳುವ ಇವರು ಸೋಷಿಯಲ್ ಮೀಡಿಯಾದಲ್ಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.

Related Articles

Back to top button
error: Content is protected !!