ಆರೋಪಿಗಳು ಪ್ರಭಾವ ಬೀರುವ ಹಿನ್ನೆಲೆ, ದರ್ಶನ್ ಮತ್ತು ಗ್ಯಾಂಗ್ ವಿರುದ್ಧ, ಚಾರ್ಜ್ಶೀಟ್ ಸಲ್ಲಿಕೆಗೆ ಶರವೇಗದ ತಯಾರಿ

Views: 84
ಬೆಂಗಳೂರು: ಈಗಾಗಲೇ ಪರಪ್ಪನ ಅಗ್ರಹಾರ ಕಾರಾಗೃಹ ಸೇರಿದ್ದ ದರ್ಶನ್ ಮತ್ತು ಗ್ಯಾಂಗ್ ವಿರುದ್ಧ, ವಿಜಯನಗರ ಉಪವಿಭಾಗದ ಪೊಲೀಸರು ಆದಷ್ಟು ಶೀಘ್ರ ಚಾರ್ಜ್ಶೀಟ್ ಸಲ್ಲಿಕೆಗೆ ತಯಾರಿ ನಡೆಸುತ್ತಿದ್ದಾರೆ.
ಪೊಲೀಸರು ಪ್ರತ್ಯೇಕ ತಂಡಗಳನ್ನಾಗಿ ರಚಿಸಿಕೊಂಡು ಪರಸ್ಪರ ಸಹಕಾರದೊಂದಿಗೆ ಕರ್ತವ್ಯದಲ್ಲಿ ತೊಡಗಿದ್ದಾರೆ.ಈಗಾಗಲೇ ದರ್ಶನ್ ಹಾಗೂ ಆತನ ಗ್ಯಾಂಗ್ಅನ್ನು ಬಂಧಿಸಿ ಸತತ 12 ದಿನಗಳ ಕಾಲ ತಮ ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಿ ಸಾಕಷ್ಟು ಹೇಳಿಕೆಗಳನ್ನು ದಾಖಲಿಸಿ ಬರೋಬ್ಬರಿ 139 ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
ಸದ್ಯ ಆರೋಪಿಗಳೆಲ್ಲರೂ ನ್ಯಾಯಂಗ ಬಂಧನದ ಬಳಿಕವೂ ಈ ಪ್ರಕರಣಕ್ಕೆ ಸಂಬಂಧಿಸಿದ ಮತ್ತಷ್ಟು ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದಾರೆ.ಈ ಪ್ರಕರಣವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕಾರ್ಯಪ್ರವೃತ್ತರಾಗಿದ್ದಾರೆ .
ಇದರ ನಡುವೆ ಮಹತ್ವದ ಟೆಕ್ನಿಕಲ್ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿರುವ ತನಿಖಾ ತಂಡಗಳು ಎಲ್ಲ 17 ಆರೋಪಿಗಳ ಮೊಬೈಲ್ಗಳ ಡಾಟಾ ರಿಟ್ರೀವ್ ಕಾರ್ಯ ನಡೆಸಲಾಗಿದೆ.ಸಿಐಡಿ ಟೆಕ್ನಿಕಲ್ ಸೆಲ್ನಲ್ಲಿ ದರ್ಶನ್, ಪವಿತ್ರಾಗೌಡ, ಪವನ್ ಹಾಗೂ ವಿನಯ್ ಮೊಬೈಲ್ ಸೇರಿದಂತೆ ಇನ್ನೂ ಕೆಲವು ಆರೋಪಿಗಳ ಮೊಬೈಲ್ ಡೇಟಾ ರಿಟ್ರೀವ್ ನಡೆಸಿ ಸಾಕ್ಷ್ಯಗಳ ಸಂಗ್ರಹ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಾವಳಿಗಳು ಸಹ ಮಹತ್ವದ ಕಾರ್ಯ ನಿರ್ವಹಿಸಿದ್ದು, ಅದರಲ್ಲಿನ ದೃಶ್ಯಗಳ ಸಂಗ್ರಹದಲ್ಲಿ ತನಿಖಾ ತಂಡ ತೊಡಗಿದೆ.ಇದುವರೆಗೂ 62 ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗುತ್ತಿದೆ. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ಪಟ್ಟಣಗೆರೆ ಶೆಡ್ಗೆ ಕರೆತಂದ ಮಾರ್ಗಗಳಲ್ಲಿನ ಸಿಸಿ ಕ್ಯಾಮೆರಾಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ಅಲ್ಲದೆ, ಪಟ್ಟಣಗೆರೆ ಶೆಡ್ನಿಂದ ಸುಮನಹಳ್ಳಿ, ರಾಜಕಾಲುವೆವರೆಗೂ ರೇಣುಕಾಸ್ವಾಮಿ ಶವ ಸಾಗಿಸಲಾದ ಮಾರ್ಗದಲ್ಲಿನ 36 ಸಿಸಿಟಿವಿ ದೃಶ್ಯಗಳ ಸಂಗ್ರಹ ಮಾಡಲಾಗಿದೆ. ಮೃತದೇಹ ತೆಗೆದುಕೊಂಡು ಹೋಗಿದ್ದ ಕಾರ್ತಿಕ್ ಮತ್ತು ಆತನ ತಂಡದ ಒಂದು ಕಾರನ್ನು ಪ್ರದೋಶ್ ಮತ್ತು ವಿನಯ್ ತಂಡ ಹಿಂದೆ ಹಿಂಬಾಲಿಸಿಕೊಂಡು ಬಂದಿದ್ದರು.
ಪಟ್ಟಣಗೆರೆ ಶೆಡ್ನಿಂದ ಆರ್ಆರ್ ನಗರ ಮುಖ್ಯಸ್ತೆಯಿಂದ ನಾಯಂಡಹಳ್ಳಿ ಜಂಕ್ಷನ್ಗೆ ಬಂದಿದ್ದ ಕಾರುಗಳು, ನಾಯಂಡಹಳ್ಳಿಯಿಂದ ಸುಮನಹಳ್ಳಿ ಮಾರ್ಗವಾಗಿ ಆರೋಪಿಗಳು ಹೋಗಿದ್ದರು.ಸುಮನಹಳ್ಳಿ ಮಾರ್ಗವಾಗಿ ನೇರವಾಗಿ ಹೋಗಿ ರಾಜ್ಕುಮಾರ್ ರಸ್ತೆ ಕಡೆಗೆ ಕಾರನ್ನು ತಿರುಗಿಸಿಕೊಂಡಿದ್ದರು. ನಂತರ ಸುಮನಹಳ್ಳಿ ಬ್ರಿಡ್್ಜನ ರಾಜಕಾಲುವೆ ಬಳಿ ತಲುಪಿದ್ದರು.ಇಲ್ಲಿನ ಅಪಾರ್ಟಮೆಂಟ್ ರಸ್ತೆಯಲ್ಲಿ ಹೋಗಿ ಯು ಟರ್ನ್ ತೆಗೆದುಕೊಂಡು ಮುಂದೆ ಸಾಗಿ ರಸ್ತೆ ಕೊನೆಗೆ ಹೋಗಿ ಮತ್ತೆ ಯು ಟರ್ನ್ ತೆಗೆದುಕೊಂಡಾಗ ಮೊದಲು ಹೋಗಿದ್ದ ಪ್ರದೋಶ್ ಮತ್ತು ವಿನಯ್ ಕಾಲುವೆಗೆ ಮೊಬೈಲ್ ಬಿಸಾಡಿದ್ದ.
ಆ ಬಳಿಕ ಮೃತದೇಹ ತೆಗೆದುಕೊಂಡು ಹಿಂದೆ ಬರುತ್ತಿದ್ದ ಆರೋಪಿಗಳು ರಾಜಕಾಲುವೆಗೆ ಎಸೆದು ಪರಾರಿಯಾಗುವಾಗ ಒಂದೇ ದಾರಿಯಲ್ಲಿ ಹೋಗಿ ಬರುವಾಗ ಬದಲಿ ಮಾರ್ಗಗಳನ್ನು ಬದಲಿಸಿದ್ದುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಈ ಪ್ರಕರಣದಲ್ಲಿ ಆರೋಪಿಗಳ ಬಂಧನದ ವೇಳೆ ಹಾಗೆಯೇ ತನಿಖೆ ಸಮಯದಲ್ಲಿಯೂ ಸಾಕಷ್ಟು ಒತ್ತಡಗಳು ಬಂದಿದ್ದವು. ಹಾಗಾಗಿ ಇದನ್ನೆಲ್ಲ ಪರಿಗಣಿಸಿ ಆದಷ್ಟು ಶೀಘ್ರದಲ್ಲಿ ಚಾರ್ಜ್ಶೀಟ್ ಹಾಕಲು ಸಿದ್ಧತೆ ನಡೆಸಲಾಗುತ್ತಿದೆ.
ತಮಗೆ ದೊರೆತಿರುವ 50 ರಿಂದ 60 ದಿನಗಳೊಳಗೆ ಚಾರ್ಜ್ಶೀಟ್ ಸಿದ್ಧತೆಗೆ ಯೋಜನೆ ಹಾಕಲಾಗಿದೆ. ಒಂದು ವೇಳೆ ಚಾರ್ಜ್ಶೀಟ್ ಸಲ್ಲಿಸಲು ತಡ ಮಾಡಿದರೆ ಸಾಕ್ಷ್ಯಗಳ ಮೇಲೆ ಆರೋಪಿಗಳು ಪ್ರಭಾವ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ವಿಜಯನಗರ ಉಪವಿಭಾಗದ ಪೊಲೀಸರು ಬಹಳ ಜಾಗರೂಕತೆಯಿಂದ ಹಗಲಿರುಳೆನ್ನದೆ ಕರ್ತವ್ಯ ನಿರತರಾಗಿದ್ದಾರೆ.






