ಆರೋಗ್ಯ

ಆಯುಷ್ಮಾನ್ ಭಾರತ್: ಬಡ ವರ್ಗದ ಬಿಪಿಎಲ್ ಕುಟುಂಬದವರಿಗೆ ಗುಡ್ ನ್ಯೂಸ್..! ಸರ್ಕಾರದಿಂದ 10 ಲಕ್ಷ ರೂಪಾಯಿ ಸೌಲಭ್ಯ..? ಇಂದೇ ಅರ್ಜಿ ಸಲ್ಲಿಸಿ..!

Views: 175

ಆಯುಷ್ಮಾನ್ ಭಾರತ್ ಯೋಜನೆಯಡಿ ಬಡ ವರ್ಗದ ಕುಟುಂಬದವರಿಗೆ 10 ಲಕ್ಷ ರೂಪಾಯಿ ಸೌಲಭ್ಯ ದೊರೆಯಲಿದೆ.ಕೇಂದ್ರ ಸರ್ಕಾರವು ಆಯುಷ್ಮಾನ್ ಅಭಿಯಾನವನ್ನು ಆರಂಭ ಮಾಡಿದೆ.

ಈ ಯೋಜನೆ ಅಡಿಯಲ್ಲಿ ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳು ವಾರ್ಷಿಕವಾಗಿ 5 ಲಕ್ಷ ಮೌಲ್ಯದ ಚಿಕಿತ್ಸೆಯನ್ನು ಉಚಿತವಾಗಿ ಪಡೆಯುತ್ತಿದ್ದಾರೆ. 2018 ರಲ್ಲಿ ಪ್ರಾರಂಭವಾದ ಆಯುಷ್ಮಾನ್ ಯೋಜನೆಯು ಬಹಳಷ್ಟು ಬಡವರ ಕುಟುಂಬದವರಿಗೆ ಸಹಾಯಕವಾಗಿದೆ.

ಈ ಯೋಜನೆಯಡಿಯಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ದ್ವಿತೀಯ ತೃತೀಯ ಹಾರೈಕೆ ಆಸ್ಪತ್ರೆಗಳಿಗೆ ದಾಖಲಾಗಲು ಹೆಮ್ಮೆ ಸೌಲಭ್ಯವನ್ನು ಪಡೆಯಬಹುದು.

ಆರೋಗ್ಯ ವಿಮಾ ಯೋಜನೆ ಅಂದರೆ ಆಯುಷ್ಮಾನ್ ಭಾರತ್ ಯೋಜನೆಯ ಉಪಯೋಗವನ್ನು ಪಡೆಯುವ ಫಲಾನುಭವಿಗಳಿಗೆ ಸರ್ಕಾರವು ಇನ್ನಷ್ಟು ಸಹಾಯ ಮಾಡಲು ಮುಂದಾಗಿದೆ.

ಸದ್ಯ ಇದರ ಮಿತಿಯನ್ನು ರೂ. 5 ಲಕ್ಷದಿಂದ 10 ಲಕ್ಷ ರೂಪಾಯಿ ಗೆ ಹೆಚ್ಚಳ ಮಾಡಲು ಮುಂದಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

2024 ರಲ್ಲಿ ಕೇಂದ್ರದ ಬಜೆಟ್ ನಲ್ಲಿ ಆಯುಷ್ಮಾನ್ ಭಾರತ್ ಯೋಜನೆಗೆ 7,200 ಕೋಟಿ ಹಣವನ್ನು ನಿಗದಿಪಡಿಸಲಾಗಿತ್ತು. ಇದೀಗ 2025 ರ ಹಣಕಾಸು ವರ್ಷದಲ್ಲಿ 15,000 ಕೋಟಿ ರೂಪಾಯಿ ಅನ್ನು ನಿಗಪಡಿಸಲಾಗಿದೆ.

ಪಿ.ಎಂ.ಜೆ.ಏ.ವೈ(PMJAY) ಯೋಜನೆಯ ಅಡಿಯಲ್ಲಿ ಈಗಾಗಲೇ 30 ಕೋಟಿ ಜನರು ಈ ಕಾರ್ಡನ್ನು ಹೊಂದಿದ್ದು ಬಿಪಿಎಲ್ ಕಾರ್ಡ್ ಇದ್ದವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಆಯುಷ್ಮಾನ್ ಭಾರತ್ ಯೋಜನೆಯ ಸೌಲಭ್ಯವನ್ನು ಪಡೆಯಲು ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಯಾವೆಲ್ಲ ಸೌಲಭ್ಯಗಳು ದೊರಕುತ್ತವೆ ?

ಈ ಯೋಜನೆಯ ಒಟ್ಟು ಅನುದಾನದ ಪಾಲಿನಲ್ಲಿ ರಾಜ್ಯ ಸರ್ಕಾರವು ಶೇ. 66 ರಷ್ಟು ನೀಡುತ್ತಿದ್ದರೆ, ಕೇಂದ್ರ ಸರ್ಕಾರವು ಶೇ. 34 ರಷ್ಟು ನೀಡಲಿದೆ. ದೇಶದಾದ್ಯಂತ ಇರುವ ಯಾವುದೇ ಆಸ್ಪತ್ರೆಯಲ್ಲಾದರು ಚಿಕಿತ್ಸೆಯನ್ನು ಪಡೆಯಲು ಅವಕಾಶವಿದೆ.

ಸರ್ಕಾರದ ಆರೋಗ್ಯ ವಿಮಾ ಯೋಜನೆಯಲ್ಲಿ ತಪಾಸಣೆ, ಔಷಧಿಗಳು, ಆಸ್ಪತ್ರೆಗಳ ವೆಚ್ಚ, ಇನ್ನಿತರ ಸೌಲಭ್ಯಗಳು ದೊರಕುತ್ತವೆ. ಕ್ಯಾನ್ಸರ್, ಕೊರೊನ ಅರ್ಟರಿ ಬೈಪಾಸ್ ಗ್ರಾಫ್ಟಿಂಗ್, ಸರ್ಜರಿ ಹಾಗೂ ಇತ್ಯಾದಿಗಳಿಗೆ ವೆಚ್ಚ ಸಿಗಲಿದೆ.

ಆಯುಷ್ಮಾನ್ ಭಾರತ್ ಕಾರ್ಡ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ವಿಧಾನ

ಬಡ ಕುಟುಂಬಗಳಿಗೆ ಉಚಿತ ಆರೋಗ್ಯ ವಿಮಾ ಸೌಲಭ್ಯವನ್ನು ಒದಗಿಸುವ ಪ್ರಮುಖ ಯೋಜನೆ ಎಂದರೆ ಆಯುಷ್ಮಾನ್ ಭಾರತ್. ಇದಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿದೆ ಸುಲಭ ಮಾರ್ಗ.

ಆಯುಷ್ಮಾನ್ ಭಾರತ್ ಯೋಜನೆಯನ್ನು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PMJAY) ಎಂದೂ ಸಹ ಕರೆಯಲಾಗುತ್ತದೆ. ಭಾರತ ಸರ್ಕಾರದ ಈ ಮಹಾತ್ವಾಕಾಂಕ್ಷೆಯ ಯೋಜನೆಯು ಬಡ ಮತ್ತು ಹಿಂದುಳಿದ ಕುಟುಂಬಗಳಿಗೆ ಉಚಿತ ಆರೋಗ್ಯ ವಿಮಾ ಸೌಲಭ್ಯವನ್ನು ಒದಗಿಸುತ್ತದೆ.

ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಆಯುಷ್ಮಾನ್ ಭಾರತ್ ಕಾರ್ಡ್ ಅನ್ನು ವಿತರಿಸಲಾಗುತ್ತದೆ. ಇದರ ನೆರವಿನಿಂದ ಅರ್ಹ ಭಾರತೀಯ ನಾಗರೀಕರು ದೇಶಾದ್ಯಂತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬಹುದು.

ನೀವೂ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ ಆಯುಷ್ಮಾನ್ ಭಾರತ್ ಕಾರ್ಡ್‌ಗಾಗಿ ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು. ಅದಕ್ಕೂ ಮೊದಲು ಈ ಯೋಜನೆಯ ಫಲಾನುಭವಿಯಾಗಲು ಅರ್ಹತಾ ಮಾನದಂಡ ಏನು? ಇದಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಸುಲಭ ಮಾರ್ಗ ಯಾವುದು ಎಂದು ತಿಳಿಯೋಣ…

ನಿಯಮಾನುಸಾರ, ಎಲ್ಲಾ ಸಾಮಾಜಿಕ ಆರ್ಥಿಕ ಜಾತಿಗಳ (SECC) ಫಲಾನುಭವಿಗಳು ಆಯುಷ್ಮಾನ್ ಭಾರತ್ ಯೋಜನೆಯಡಿ ಸಿಗುವ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಯೋಜನೆಗೆ ನೀವು ಅರ್ಹರಾಗಿದ್ದೀರಿಯೇ ಎಂದು ಪರಿಶೀಲಿಸಲು ಆಯುಷ್ಮಾನ್ ಭಾರತ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಲ್ಲಿ “ನಿಮ್ಮ ಅರ್ಹತೆಯನ್ನು ಪರಿಶೀಲಿಸಿ” ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಪಡಿತರ ಕಾರ್ಡ್ ಸಂಖ್ಯೆ ಅಥವಾ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.

ಆಯುಷ್ಮಾನ್ ಭಾರತ್ ಕಾರ್ಡ್‌ಗಾಗಿ ಅಪ್ಲಿಕೇಶನ್ ಪ್ರಕ್ರಿಯೆ 

ಆಯುಷ್ಮಾನ್ ಭಾರತ್ ಯೋಜನೆಯ ಸೌಲಭ್ಯಗಳನ್ನು ಪಡೆಯಲು ನೀವು ಅರ್ಹರಾಗಿದ್ದರೆ, ನೀವು ಅದೇ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಇದಕ್ಕಾಗಿ, “ಅಪ್ಪ್ಲೈ ಮಾಡಿ” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ನಿಗದಿತ ಜಾಗದಲ್ಲಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ರೇಷನ್ ಕಾರ್ಡ್ ಸಂಖ್ಯೆ ಅಥವಾ ಆಧಾರ್ ಕಾರ್ಡ್ ಸಂಖ್ಯೆಯಂತಹ ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿ. ಇದನ್ನು ಸೇವ್ ಮಾಡುವ ಮೊದಲು ನೀವು ನಮೂದಿಸಿರುವ ಎಲ್ಲಾ ಮಾಹಿತಿಗಳು ಸರಿಯಾಗಿವೆಯೇ ಎಂದು ಎಚ್ಚರಿಕೆಯಿಂದ ಪರಿಶೀಲಿಸಿ. ಬಳಿಕ ಸೇವ್ ಮಾಡಿ.

ಅರ್ಜಿ ಸಲ್ಲಿಸಿದ ವೇಳೆ ನೀವು ಅಪ್ಲಿಕೇಶನ್ ಉಲ್ಲೇಖ ಸಂಖ್ಯೆಯನ್ನು ಸ್ವೀಕರಿಸುತ್ತೀರಿ. ಭವಿಷ್ಯದ ಉಪಯೋಗಕ್ಕಾಗಿ ಇದರ ಪ್ರಿಂಟ್ ಔಟ್ ಪಡೆದು ಜೋಪಾನವಾಗಿಡಿ.

ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಬಳಿಕ ಕೆಲವೇ ವಾರಗಳಲ್ಲಿ ನಿಮ್ಮ ಆಯುಷ್ಮಾನ್ ಭಾರತ್ ಕಾರ್ಡ್ ನಿಮ್ಮ ವಿಳಾಸಕ್ಕೆ ಬರುತ್ತದೆ. ಈ ಕಾರ್ಡ್ ಸಹಾಯದಿಂದ ನಿಗದಿತ ಮೊತ್ತದವರೆಗೆ ನೀವು ಯಾವುದೇ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆಯನ್ನು ಪಡೆಯಬಹುದು.

 

 

 

 

 

 

 

ಆಯುಷ್ಮಾನ್ ಭಾರತ್ ಕಾರ್ಡ್‌ ಸ್ಟೇಟಸ್ ಪರಿಶೀಲನೆ:-

ನೀವು ಒಮ್ಮೆ ಆಯುಷ್ಮಾನ್ ಭಾರತ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಅಪ್ಲಿಕೇಶನ್ ಸ್ಥಿತಿಯನ್ನು ನೀವು ಅದೇ ವೆಬ್‌ಸೈಟ್‌ನಲ್ಲಿ ಟ್ರ್ಯಾಕ್ ಮಾಡಬಹುದು. ಇದಕ್ಕಾಗಿ “ಟ್ರ್ಯಾಕ್ ಅಪ್ಲಿಕೇಶನ್ ಸ್ಟೇಟಸ್” ಲಿಂಕ್ ಅನ್ನು ಆಯ್ಕೆಯ್ ಮಾಡಿ ನಿಗದಿತ ಜಾಗದಲ್ಲಿ ಅಪ್ಲಿಕೇಶನ್ ಉಲ್ಲೇಖ ಸಂಖ್ಯೆಯನ್ನು ನಮೂದಿಸಿ. ಈ ಸಮಯದಲ್ಲಿ ನಿಮ್ಮ ಅಪ್ಲಿಕೇಶನ್ ಯಾವ ಸ್ಥಿತಿಯಲ್ಲಿದೆ ಎಂಬ ಇತ್ತೀಚಿನ ಮಾಹಿತಿಯನ್ನು ಪಡೆಯುತ್ತೀರಿ.

Related Articles

Back to top button