ಆಯುಷ್ಮಾನ್ ಕಾರ್ಡ್: ದೇಶಾದ್ಯಂತ ಯಾವುದೇ ಆಸ್ಪತ್ರೆಯಲ್ಲಿ 5. ಲಕ್ಷದವರೆಗೆ ಉಚಿತ ಚಿಕಿತ್ಸೆ -ಕನ್ನಡ ಕರಾವಳಿ

Views: 0
ಈ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ವರ್ಷಕ್ಕೆ 5ಲಕ್ಷ ರೂ. ತನಕ ಕವರೇಜ್ ಪಡೆಯಬಹುದು. ಇನ್ನು ಈ ಯೋಜನೆಯಡಿ ಲಿಸ್ಟ್ ಮಾಡಿರುವ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ (ಖಾಸಗಿ ಕೂಡ ಸೇರಿದೆ) ಪಡೆಯಬಹುದಾಗಿದೆ. ಇನ್ನು ಈ ಕವರೇಜ್ 3 ದಿನಗಳ ಆಸ್ಪತ್ರೆ ಸೇರ್ಪಡೆ ಮುನ್ನದ ಹಾಗೂ 15 ದಿನಗಳ ಆಸ್ಪತ್ರೆ ಸೇರ್ಪಡೆ ಬಳಿಕದ ವೆಚ್ಚಗಳನ್ನು ಕೂಡ ಒಳಗೊಂಡಿದೆ. ಈ ಮೂಲಕ ಬಡವರಿಗೆ ಆಸ್ಪತ್ರೆ ವೆಚ್ಚದ ಭಾರವನ್ನು ಈ ಯೋಜನೆ ತಗ್ಗಿಸುತ್ತಿದೆ. ಪ್ರತಿವರ್ಷ ಆರು ಕೋಟಿ ಜನರಿಗೆ ಈ ಯೋಜನೆ ನೆರವಾಗುತ್ತಿದೆ. ಇನ್ನು ಆಯುಷ್ಮಾನ್ ಕಾರ್ಡ್ ಹೊಂದಿರುವವ್ಯಕ್ತಿ ದೇಶಾದ್ಯಂತ ಪಟ್ಟಿಯಲ್ಲಿರುವ ಯಾವುದೇ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ.
ಯಾವೆಲ್ಲ ಕಾಯಿಲೆಗಳಿಗೆ ಇದರ ಸದುಪಯೋಗ
ತೀವ್ರ ಮತ್ತು ತೀವ್ರ ನಿಗಾ ಸೇವೆಗಳ ವೆಚ್ಚವನ್ನು ಕೂಡ ಪಿಎಂಜೆಎವೈ ಅಡಿಯಲ್ಲಿ ಭರಿಸಬಹುದು. ಹೃದ್ರೋಗ ಚಿಕಿತ್ಸೆಯಿಂದ ಹಿಡಿದು ಕ್ಯಾನ್ಸರ್ ಚಿಕಿತ್ಸೆಯ ತನಕ ಈ ಯೋಜನೆಯಡಿಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು. ಈ ಯೋಜನೆ ಅಡಿ ಕವರೇಜ್ ಸಿಗುವ ಕೆಲವು ಕಾಯಿಲೆಗಳ ಪಟ್ಟಿ ಇಲ್ಲಿದೆ.
*ಪ್ರೋಸ್ಟೇಟ್ ಕ್ಯಾನ್ಸರ್
*ಕೊರೋನರಿ ಆರ್ಟರಿ ಬೈಪಾಸ್ ಗ್ರಾಫ್ಟಿಂಗ್
*ಡಬಲ್ ವಾಲ್ವ ರಿಪ್ಲೇಸ್ ಮೆಂಟ್
*ಕಾರ್ರೋಟಿಡ್ ಆಂಜಿಯೋಪ್ಲಾಸ್ಟಿ ವಿಥ್ ಸ್ಟಂಟ್
*ಪಲ್ಮನರಿ ವಾಲ್ವ ರಿಪ್ಲೇಸ್ ಮೆಂಟ್
*ಸ್ಕಲ್ ಬೇಸ್ ಸರ್ಜರಿ
*ಆಂಟೀರಿಯರ್ ಸ್ಪೈನ್ ಫಿಕ್ಸೇಷನ್
*ಸುಟ್ಟ ಗಾಯಕ್ಕೆ ಸಂಬಂಧಿಸಿ ಟಿಶ್ಯೂ ಎಕ್ಸ್ ಪ್ಯಾಂಡರ್ ಚಿಕಿತ್ಸೆ