ಸಾಂಸ್ಕೃತಿಕ

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಕೀಳುಮಟ್ಟದ ಟ್ವೀಟ್‌: ಅಪ್ಪು ಫ್ಯಾನ್ಸ್‌ ಆಕ್ರೋಶ ಬೆನ್ನಲ್ಲೇ ದರ್ಶನ್ ಹೇಳಿದ್ದೇನು?

Views: 81

ಬೆಂಗಳೂರು: ಈ ಬಾರಿ ಆರ್‌ಸಿಬಿ ತಂಡ ನಾಲ್ಕು ಪಂದ್ಯಗಳಲ್ಲಿ ಮೂರು ಸೋತು, ಒಂದು ಮ್ಯಾಚ್ ಗೆದ್ದಿದೆ. ಇದರ ಬೆನ್ನಲ್ಲೇ ದರ್ಶನ್‌  ಕೆಲ ಫ್ಯಾನ್ಸ್‌ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌

ಅವರನ್ನು ದೂರುತ್ತಿದ್ದಾರೆ. ‘ಗಂಡ ಇಲ್ಲದ ಮಹಿಳೆಯನ್ನು ಶುಭ ಕಾರ್ಯಕ್ಕೆ ಕರೆಸಿದ್ದು ಸರಿ ಅಲ್ಲ, ಇದಕ್ಕಾಗಿಯೇ ಆರ್‌ಸಿಬಿ ಸೋಲುತ್ತಿದೆ’ ಎಂದು ‘ಗಜಪಡೆ ಹೆಸರಿನ ಟ್ವಿಟರ್ ಅಕೌಂಟ್ ಕೀಳು ಮಟ್ಟದ ಟ್ವೀಟ್ ಮಾಡಿದೆ. ಸದ್ಯ ಈ ಸುದ್ದಿ ದರ್ಶನ್ ಅವರ ಗಮನಕ್ಕೆ ಬಂದಿದೆ.

ಈ ಪೋಸ್ಟ್ ಬಗ್ಗೆ ಡಿ ಕಂಪನಿ ತಂಡದ ಪ್ರಮುಖ ಅಡ್ಮಿನ್ ಹಾಗೂ ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ(ರಿ)ಕೇಂದ್ರ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪುನೀತ್ ದರ್ಶನ್ ಗೌಡ್ರು ದರ್ಶನ್ ಅವರ ಗಮನಕ್ಕೆ ಈ ಸುದ್ದಿ ಬಂದಿದ್ದು, ಈ ಬಗ್ಗೆ ಫೋನ್ ಮಾಡಿ ಮಾತನಾಡಿ ಬೇಸರ ವ್ಯಕ್ತಪಡಿಸಿದರು ಎಂದು ಮಾದ್ಯಮವೊಂದಕ್ಕೆ ಮಾಹಿತಿ ಹಂಚಿಕೊಂಡಿದ್ದಾರೆ.

ʻʻಈ ಪೋಸ್ಟ್ ನಟ ದರ್ಶನ್ ಅವರ ಗಮನಕ್ಕೂ ಬಂದಿದೆ. ಈ ಬಗ್ಗೆ ಫೋನ್ ಮಾಡಿ ಮಾತನಾಡಿ ಬೇಸರ ವ್ಯಕ್ತಪಡಿಸಿದರು. ಯಾರೇ ಆಗಿದ್ದರೂ ಈ ರೀತಿ ಮಾಡುವುದು ತಪ್ಪು. ಇದು ಯಾರು ಮಾಡಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ವಿಚಾರಿಸಿ ಕ್ರಮ ಕೈಗೊಳ್ಳಿ. ಈ ಬಗ್ಗೆ ಗಮನ ಹರಿಸಿ. ಸೋಷಿಯಲ್ ಮೀಡಿಯಾವನ್ನು ಸರಿಯಾದ ರೀತಿಯಲ್ಲಿ ಬಳಸಬೇಕು. ತಪ್ಪಾಗಿ ಅದನ್ನು ಬಳಸಬಾರದು ” ಎಂದು ದರ್ಶನ್ ಹೇಳಿರುವುದಾಗಿ ಪುನೀತ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಆರ್‌ಸಿಬಿ  ಸೋಲುವುದಕ್ಕೂ, ಅಶ್ವಿನಿ ಪುನೀತ್ ರಾಜ್ ಕುಮಾರ್ ಗೂ ಏನು ಸಂಬಂಧ? ಎಂದು ಅಪ್ಪು ಫ್ಯಾನ್ಸ್‌ ಆಕ್ರೋಶ ಹೊರಹಾಕುತ್ತಿದ್ದು, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಈ ಟ್ವೀಟ್ ನಿಂದ  ಪುನೀತ್ ರಾಜಕುಮಾರ್ ಫ್ಯಾನ್ಸ್ ಸದ್ಯ ಕೋಪಗೊಂಡಿದ್ದಾರೆ. ಕಾನೂನು ಕ್ರಮಕ್ಕೆ ಅಪ್ಪು ಅಭಿಮಾನಿಗಳು ಮುಂದಾಗಿದ್ದಾರೆ.

Related Articles

Back to top button
error: Content is protected !!