ಇತರೆ
ಅಮಾಸೆಬೈಲು ಸಮೀಪ ಕಾರು ಢಿಕ್ಕಿಯಾಗಿ ಸೈಕಲ್ ಸವಾರ ಗಂಭೀರ
Views: 85
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಹಾಲಾಡಿ ರಸ್ತೆಯ ಅಮಾಸೆಬೈಲು ಅರಣ್ಯ ಇಲಾಖೆಯ ಕಚೇರಿಯ ಹತ್ತಿರ ಕಾರು ಢಿಕ್ಕಿಯಾಗಿ ಸೈಕಲ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಂಭೀರ ಗಾಯಗೊಂಡವರು ಮಹಾಬಲ ಪೂಜಾರಿ (55) ಎಂದು ಗುರುತಿಸಲಾಗಿದೆ. ಚಾಲಕ ವಸೀಮ್ ಕಾರನ್ನು ಅಜಾಗರೂಕತೆಯಿಂದ ಚಲಾಯಿಸಿದ್ದು ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ಪೊಲೀಸ್ ಸಿಬಂದಿ ಶಶಿಧರ ಶೆಟ್ಟಿ ಹಾಲಾಡಿ ಅವರು, ಗಾಯಾಳುವನ್ನು ನೋಡಿ ಉಪಚರಿಸಿದರು. ಸ್ಥಳೀಯರಾದ ನಂದನ್, ಅರುಣ್ ಶೆಟ್ಟಿ ಮತ್ತು ರಾಜೇಶ್ ಅವರ ನೆರವಿನೊಂದಿಗೆ ಕಾರಿನಲ್ಲಿ ಹಾಲಾಡಿ ಆಸ್ಪತ್ರೆಗೆ ಕರೆದುಕೊಂಡು ಹೋದರು.ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದರು. ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ






