ಅಮಾಸೆಬೈಲು ಪೋಕ್ಸೋ ಪ್ರಕರಣ: ಪೋಟೋ, ವಿಡಿಯೋ ರೆಕಾರ್ಡಿಂಗ್ ತನಿಖೆ: ಎಸ್ಪಿ

Views: 207
ಕುಂದಾಪುರ ತಾಲೂಕಿನ ಅಮಾಸೆಬೈಲು ಠಾಣಾ ವ್ಯಾಪ್ತಿಯಲ್ಲಿ ನಡೆದ ಪೊಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಆರೋಪಿ ತಲೆಮರಸಿಕೊಂಡಿದ್ದು, ಆತ ಮಾಡಿರುವ ವಿಡಿಯೋ ರೆಕಾರ್ಡಿಂಗ್ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಸ್ಪಷ್ಟಪಡಿಸಿದ್ದಾರೆ.
ಆರೋಪಿ ವಿಡಿಯೋ ಮಾಡಿರುವ ಬಗ್ಗೆ ಅಥವಾ ಹಿಂದೆ ಬೇರೆಯವರಿಗೂ ಈ ರೀತಿ ವಿಡಿಯೋ ಮಾಡಿ ಬೆದರಿಕೆ ಹಾಕಿ ದೌರ್ಜನ್ಯ ಎಸಗಿರುವ ಬಗ್ಗೆ ನಮ್ಮ ಬಳಿ ಯಾವುದೇ ಮಾಹಿತಿ ಇಲ್ಲ ನ್ಯಾಯಾಧೀಶರ ಮುಂದೆ ಸಂತ್ರಸ್ತೆ ನೀಡಿದ ಹೇಳಿಕೆಯಲ್ಲಿ ಇಬ್ಬರು ಒಂದೇ ಸಮುದಾಯದವರಾಗಿದ್ದು ಕೆಲವು ಸಮಯಗಳಿಂದ ಸಂಪರ್ಕದಲ್ಲಿದ್ದರು ಆದರೆ, ವಿಡಿಯೋ ರೆಕಾರ್ಡಿಂಗ್ ಬಗ್ಗೆ ಯಾವುದೇ ಹೇಳಿಕೆ ನೀಡಲಿಲ್ಲ ಆತನ ಲ್ಯಾಪ್ಟ್ಯಾಪ್ ವಶಪಡಿಸಿಕೊಂಡಿದ್ದು ಅದರ ಮೂಲಕ ಮಾಹಿತಿ ದಾಖಲೆಗಳನ್ನು ಸಂಗ್ರಹಿಸಲಾಗುವುದು ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು ಆಕೆಯ ಮೇಲೆ ದೌರ್ಜನ್ಯ ನಡೆಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸದ್ಯ ಆರೋಪಿ ಶ್ರೇಯಸ್ ಪರಾರಿಯಾಗಿದ್ದಾನೆ






