ಕರಾವಳಿ

ಅಮವಾಸ್ಯೆ ದಿನ ರಸ್ತೆಯ ಸರ್ಕಲ್‌ಗಳಲ್ಲಿ ಮಾಟ, ಮಂತ್ರ ಮಾಡುತ್ತಿದ್ದ ವ್ಯಕ್ತಿಯನ್ನು ಬೀಜಾಡಿ ಗ್ರಾಮಸ್ಥರೇ ಹಿಡಿದು ಪೊಲೀಸ್ ವಶಕ್ಕೆ 

Views: 314

ಕುಂದಾಪುರ : ಕೋಟೇಶ್ವರ ಸಮೀಪ ಬೀಜಾಡಿ, ಗೋಪಾಡಿ, ಮಣೂರು  ಸುತ್ತಮುತ್ತಲಿನ ಪ್ರದೇಶದ ಸರ್ಕಲ್‌ ಗಳಲ್ಲಿ ಅಮವಾಸ್ಯೆಯ ದಿನದಂದು ಯಾರಿಗೂ ಗೊತ್ತಾಗದಂತೆ ಮಾಟ, ಮಂತ್ರ ಮಾಡಿ ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರೇ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.

ಕಳೆದ ಕೆಲವು ತಿಂಗಳುಗಳಿಂದ ಅಮವಾಸ್ಯೆ ದಿನ  ರಸ್ತೆಯ ಸರ್ಕಲ್‌ಗಳಲ್ಲಿ ಮಾಟ, ಮಂತ್ರ ಮಾಡಿ  ಎಸ್ಕೇಪ್‌ ಆಗುತ್ತಿದ್ದ, ಮಣೂರು, ಬೀಜಾಡಿ, ಗೋಪಾಡಿ ಗ್ರಾಮಸ್ಥರು ಮಾಟಗಾರನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಸೋಮವಾರ ಅಮಾವಾಸ್ಯೆಯ ದಿನ ಸಂಜೆ ಹೊತ್ತಿಗೆ ಬೀಜಾಡಿಯ ಹೆಬ್ರಿ ಮನೆ ಸರ್ಕಲ್‌ ಬಳಿಯಲ್ಲಿ ಮಾಟ ಮಾಡುತ್ತಿರುವಾಲೇ ವ್ಯಕ್ತಿ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾನೆ.ಆತನಿಗೆ ಥಳಿಸಿದಾಗ ಎಲ್ಲರ ಮುಂದೆ  ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ.ತಾನು ದೇವಸ್ಥಾನವೊಂದರಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ.ಆತನನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಡಾಗಡಿ ನಾಗ ಬೊಬ್ಬರ್ಯನಿಗೆ ಮೊರೆ ಹೋದ ಗ್ರಾಮಸ್ಥರು!

ಗ್ರಾಮದಲ್ಲಿ ಪ್ರತೀ ಅಮವಾಸ್ಯೆಯ ದಿನದಂದು ಮಾಟ, ಮಂತ್ರ ಮಾಡಿ  ಪರಾರಿಯಾಗುತ್ತಿದ್ದ ವ್ಯಕ್ತಿಯು ಕೈಗೆ ಸಿಗದೆ ಇರುವುದರಿಂದ ಗ್ರಾಮಸ್ಥರ ನಿದ್ದೆಗೆಡಿಸಿತ್ತು. ಅಂತಿಮವಾಗಿ ಗ್ರಾಮಸ್ಥರು  ಬೀಜಾಡಿಯ ಬಡಾಗಡಿ ಶ್ರೀ ನಾಗಬೊಬ್ಬರ್ಯ ದೇವರಿಗೆ ಮೊರೆಯಿಟ್ಟು ಮುಂದಿನ ಅಮವಾಸ್ಯೆಯ ಒಳಗಾಗಿ ಮಾಟ ಮಾಡುವ ವ್ಯಕ್ತಿಯ ಕುರುಹು ತೋರಿಸುವಂತೆ ದೇವರಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸಿದ್ದರು.ಒಂದು ತಿಂಗಳು ಕಳೆಯುವ ಮೊದಲೇ  ಗ್ರಾಮಸ್ಥರ ಬೇಡಿಕೆಯನ್ನು ದೇವರು ಈಡೇರಿಸಿದ್ದು, ಬೀಜಾಡಿ ಸರ್ಕಲ್ ಬಳಿ ಮಾಟ ಮಾಡುತ್ತಿರುವಾಗಲೇ ಆರೋಪಿ ಗ್ರಾಮಸ್ಥರ ಕೈಯಲ್ಲಿ ಸಿಕ್ಕಿ ಬಿದ್ದಿದ್ದಾನೆ. ಬಡಾಗಡಿ ನಾಗ ಬೊಬ್ಬರ್ಯ ದೇವರ ಕಾರಣೀಕ ಶಕ್ತಿಗೆ ಜನರು ಬೆರಗಾದರು

Related Articles

Back to top button
error: Content is protected !!