ಅಧಿಕಾರ ಹಂಚಿಕೆ ಸಿದ್ದು-ಡಿಕೆಶಿ ರಣತಂತ್ರ..! ಇಕ್ಕಟ್ಟಿಗೆ ಸಿಲುಕಿದ ಹೈಕಮಾಂಡ್ ಸೂತ್ರದ ಹುಡುಕಾಟ!
Views: 33
ಕನ್ನಡ ಕರಾವಳಿ ಸುದ್ದಿ: ಕಳೆದ 15 ದಿನಗಳಿಂದ ಸೂತ್ರವಿಲ್ಲದ ಗಾಳಿಪಟವಾಗಿರುವ ರಾಜ್ಯ ಕಾಂಗ್ರೆಸ್‌ಗೆ ‘ಸೂತ್ರ’ವೊಂದನ್ನು ಹುಡುಕುವ ಪ್ರಯತ್ನವನ್ನು ಹೈಕಮಾಂಡ್ ಮುಂದುವರಿಸಿದೆ. ಈ ನಡುವೆ ಎರಡೂ ಬಣಗಳಲ್ಲಿಯೂ ತಮ್ಮ ತಮ್ಮ ಪಟ್ಟನ್ನು ಸಡಿಲಿಕೆ ಮಾಡಲು ಸಿದ್ದವಿಲ್ಲದೇ ಇರುವುದು ಇದೀಗ ಹೈಕಮಾಂಡ್ ನಾಯಕರಿಗೆ ಬಿಸಿ ತುಪ್ಪವಾಗಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಐತಿಹಾಸಿಕ ಬಹುಮತ ದೊಂದಿಗೆ ಅಧಿಕಾರಕ್ಕೆ ಬರುವುದರಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರ ಪಾತ್ರವೂ ಇದೆ. ಆದರೆ ಅಧಿಕಾರ ಹಂಚಿಕೆಯ ವಿಷಯದಲ್ಲಿ ಇಬ್ಬರೂ ರಾಜಿಯಾಗಲು ಸಿದ್ಧವಿಲ್ಲದೇ ಇರುವುದು ಈಗ ಹೈಕಮಾಂಡ್ ಅನ್ನು ಇಕ್ಕಟ್ಟಿಗೆ ಸಿಲುಕಿದೆ. ಈ ನಡುವೆ ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹೀನಾಯ ಸೋಲು, ಅಹಿಂದ ನಾಯಕ ನಿತೀಶ್ ಕುಮಾರ್ ಪರ ಬಿಹಾರಿಗಳು ನಿಂತಿರುವುದನ್ನು ಗಮನಿಸಿರುವ ಕಾಂಗ್ರೆಸ್ ಕರ್ನಾಟಕದಲ್ಲಿ ಈ ಹಂತ ದಲ್ಲಿ ‘ಬದಲಾವಣೆ’ಯ ಹುತ್ತಕ್ಕೆ ಕೈಹಾಕಿದರೆ ಏನಾಗುವುದೋ ಎನ್ನುವ ಆತಂಕದಲ್ಲಿದೆ.
ಈ ನಡುವೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು, ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ಪಕ್ಷಕ್ಕೆ ‘ನಷ್ಟ’ವಾಗುವುದು ಸ್ಪಷ್ಟ.
ಒಪ್ಪಂದದ ಬಗ್ಗೆಯೇ ಹಲವರ ಗೊಂದಲ: ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಕೇಳಿಬರುತ್ತಿರುವ ಒಪ್ಪಂದದ ಗೊಂದಲ ಈಗಲೂ ಮುಂದುವರೆದಿದೆ. ಡಿ.ಕೆ.ಶಿವಕುಮಾರ್ ಆಪ್ತರು, ಸಿದ್ದರಾಮಯ್ಯ ಅವರು ಎರಡೂವರೆ ವರ್ಷದ ಬಳಿಕ ಅಧಿಕಾರ ಬಿಟ್ಟುಕೊಡುವುದಾಗಿ ಭರವಸೆ ನೀಡಿದ್ದರು ಎನ್ನುವ ಮಾತನ್ನು ತೇಲಿಬಿಡುತ್ತಿದ್ದಾರೆ. ಆದರೆ ಇನ್ನೊಂದೆಡೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಸ್ಥಾನದೊಂದಿಗೆ ಡಿಸಿಎಂ ಹುದ್ದೆಯನ್ನು ಡಿ.ಕೆ.ಶಿವಕುಮಾರ್ ಅವರಿಗೆ ನೀಡುವುದು. ಎರಡೂವರೆ ವರ್ಷದ ಬಳಿಕ ‘ಪರಿಸ್ಥಿತಿ ನೋಡಿಕೊಂಡು ತೀರ್ಮಾನ’ ತಗೆದುಕೊಳ್ಳೋಣ ಎಂದಿದ್ದರು ಎನ್ನಲಾಗುತ್ತಿದೆ. ಈ ನಡುವೆ ಸಿದ್ದು ಹಾಗೂ ಡಿಕೆ ನಡುವೆ ನಡೆದಿರುವ ‘ಆಣೆ’ ಪ್ರಮಾಣ ನಡೆಯುವ ಸಮಯದಲ್ಲಿ ಹೈಕಮಾಂಡ್‌ನ ಯಾವ ನಾಯಕರೂ ಇರಲಿಲ್ಲ ಎನ್ನುವುದು ಇದೀಗ ಕೇಳಿಬರುತ್ತಿರುವ ಹೊಸ ಸುದ್ದಿ. ಒಂದು ವೇಳೆ ಒಪ್ಪಂದವಾಗಿ ಅದಕ್ಕೆ ಸಿದ್ದರಾಮಯ್ಯ ಅವರು ಎಲ್ಲರ ಸಮ್ಮುಖದಲ್ಲಿ ಒಪ್ಪಿಕೊಂಡಿದ್ದರೆ ಈ ಪ್ರಮಾಣದಲ್ಲಿ ಹೈಕಮಾಂಡ್ ಹಗ್ಗಜಗ್ಗಾಟ ನಡೆಸುವ ಅವಶ್ಯವೇನಿತ್ತು ಎನ್ನುವುದು ಹಲವರ ಪ್ರಶ್ನೆಯಾಗಿದೆ..
ಹೈಕಮಾಂಡ್ ಹಿಂಜರಿತಕ್ಕೆ ಕಾರಣ?
*ಅಹಿಂದ ನಾಯಕತ್ವದ ಪರ ಮತದಾರರಿರುವುದು ಬಿಹಾರ ಚುನಾವಣೆ ಫಲಿತಾಂಶದಿಂದ ಸಾಬೀತು.
*ಅಹಿಂದ ನಾಯಕ ಸಿದ್ದು ವಿರೋಧ ಕಟ್ಟಿಕೊಂಡರೆ, ಸಂಖ್ಯಾ ಬಲಕ್ಕೆ ಡ್ಯಾಮೇಜ್ ಆಗುವ ಆತಂಕ
*ಡಿ.ಕೆ.ಶಿವಕುಮಾರ್ ನಾಯಕತ್ವವನ್ನು ಎಲ್ಲ ಶಾಸಕರೂ ಒಪ್ಪುವುದಿಲ್ಲ, ಆದ್ದರಿಂದ ಬದಲಾವಣೆ ಬೇಡ
ಬದಲಾವಣೆಯ ಒತ್ತಡ ಏಕೆ?
*ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲು ಸಿದ್ದರಾಮಯ್ಯರಷ್ಟೆ ಶಿವಕುಮಾರ್ ಶ್ರಮವೂ ಇದೆ
*ಕಾಂಗ್ರೆಸ್ ಅಧ್ಯಕ್ಷ ಖರ್ಗೆ ನಿವಾಸದಲ್ಲಿ ಆಗಿದೆ ಎನ್ನಲಾದ ಒಪ್ಪಂದದಂತೆ ನಡೆಯಬೇಕು ಎನ್ನುವ ಒತ್ತಡ
*ಸಿದ್ದರಾಮಯ್ಯಗೆ ಪೂರ್ಣಾವಧಿ ಅವಕಾಶ ಕೊಟ್ಟು, ಮುಂದಿನ ಬಾರಿ ಪಕ್ಷ ಸೋತು ಹೋದರೆ ಎಂಬ ಚಿಂತೆ
*ಮುಂದೆ ಚುನಾವಣೆ ನಡೆಯುವ ರಾಜ್ಯಗಳಿಗೆ ‘ಶಕ್ತಿ’ ತುಂಬಲು ಡಿಕೆಶಿ ಅವಕಾಶ ಅನಿವಾರ್ಯ
*ಇನ್ನೊಂದು ವರ್ಷದಲ್ಲಿ ನಾಲ್ಕು ರಾಜ್ಯಗಳ ಚುನಾವಣೆ ಇರುವುದೂ ಆಗ್ರ ನಾಯಕರ ಹಿಂಜರಿಕೆಗೆ ಕಾರಣ






