ಅದ್ದೂರಿ ವಿವಾಹವನ್ನೇ ನಿಲ್ಲಿಸಿ 10ನೇ ತರಗತಿ ಪರೀಕ್ಷೆಗೆ ಹಾಜರಾದ ಯುವತಿ!
Views: 35
ಕನ್ನಡ ಕರಾವಳಿ ಸುದ್ದಿ: ಮದುವೆ ಸಂಭ್ರಮದ ನಡುವೆಯೂ ಅದ್ದೂರಿ ವಿವಾಹವನ್ನೇ ನಿಲ್ಲಿಸಿ ವಧು ಪರೀಕ್ಷೆ ಬರೆಯಲು ಶಾಲೆಗೆ ಬಂದ ಘಟನೆ ಬಿಹಾರದ ಗಯಾ ಜಿಲ್ಲೆಯ ಶೇರ್ಘಾಟಿಯಲ್ಲಿ ನಡೆದಿದೆ.
ಮದುಮಗಳು ತನ್ನ 10ನೇ ತರಗತಿಯ ಬೋರ್ಡ್ ಪರೀಕ್ಷೆಗೆ ಹಾಜರಾಗಿದ್ದಾಳೆ. ಕೆಂಪು ಬಣ್ಣದ ವಧುವಿನ ಉಡುಪನ್ನು ಧರಿಸಿ, ಮಂಟಪದಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಪ್ರಯಾಣ ಬೆಳೆಸಿದ್ದಾಳೆ.
ಪೂರ್ಣ ವಧುವಿನ ಉಡುಪನ್ನು ಧರಿಸಿ, ಮಹಿಳೆ ಹೂವಿನಿಂದ ಅಲಂಕರಿಸಲ್ಪಟ್ಟ ಕಾರಿನಿಂದ ಇಳಿದು ಪರೀಕ್ಷೆ ಕೇಂದ್ರಕ್ಕೆ ಹೋಗಿದ್ದಾಳೆ. ಈ ದೃಶ್ಯವು ವಿದ್ಯಾರ್ಥಿಗಳು ಮತ್ತು ನೋಡುಗರನ್ನು ದಿಗ್ಭ್ರಮೆಗೊಳಿಸಿದೆ. ಈ ಘಟನೆ ಶೇರ್‌ಘಾಟಿಯ ಎಸ್‌ಎಂಎಸ್‌ಜಿ ಕಾಲೇಜಿನಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ಕಾರನ್ನು ತಪಾಸಣೆ ಮಾಡಿದ್ದಾರೆ. ವರನು ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತಿರುವುದನ್ನು ಕಾಣಬಹುದು. ಹಿಂದಿನ ಸೀಟಿನಿಂದ ಕೆಂಪು ಸೀರೆ ಮತ್ತು ಆಭರಣಗಳನ್ನು ಧರಿಸಿದ್ದ ವಧು ಕೆಳಗಿಳಿದು ಪರೀಕ್ಷೆ ಬರೆಯಲು ಹೋಗಿದ್ದಾಳೆ.
ಈ ವಿಡಿಯೊ ನೆಟ್ಟಿಗರನ್ನು ಅಚ್ಚರಿಗೆ ದೂಡಿದೆ. “ಅಪ್ರಾಪ್ತ ಬಾಲಕಿಯ ಮದುವೆಯೇ?” ಎಂದು ಈ ಬಗ್ಗೆ ಅನೇಕರು ಪ್ರಶ್ನಿಸಿದ್ದಾರೆ. ಒಬ್ಬರು, ʼʼಪೋಷಕರಿಗೆ ಸರಿಯಾದ ಜ್ಞಾನ ಇರಬೇಕು. ಆಕೆಯ ವಯಸ್ಸು ಎಷ್ಟು? ವರ ಮತ್ತು ವಧುವಿನ ವಯಸ್ಸನ್ನು ಸರಿಯಾಗಿ ಪರಿಶೀಲನೆಯನ್ನು ಮಾಡಬೇಕುʼʼ ಎಂದು ಕಮೆಂಟ್ ಮಾಡಿದ್ದಾರೆ.






