ಅತ್ತೆ-ಮಾವನ ಮನೆಯಿಂದ ಹೊರ ಬಂದ ಐಶ್ವರ್ಯಾ ರೈ!?

Views: 1
ಮುಂಬೈ: ಬಾಲಿವುಡ್ನ ಬಿಗ್ ಬಿ ಅಮಿತಾಭ್ ಬಚ್ಚನ್ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ವದಂತಿಗಳು ದಟ್ಟವಾಗತೊಡಗಿವೆ.

ಈಗ ಹೊಸ ಸುದ್ದಿಯ ಪ್ರಕಾರ, ಐಶ್ವರ್ಯ ರೈ ಬಚ್ಚನ್ ಅವರು ತಮ್ಮ ಅತ್ತೆ-ಮಾವನ ಮನೆಯಿಂದ ಹೊರ ಬಂದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. “ಅಭಿಷೇಕ್ ಮತ್ತು ಐಶ್ವರ್ಯ ತಮ್ಮ ಮಗುವಿನ ಸಲುವಾಗಿ ಪ್ರತ್ಯೇಕವಾಗಿ ಒಟ್ಟಿಗೆ ಇರಲಿದ್ದಾರೆ. ಅವರು ಬಹಳ ಸಮಯದಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಮತ್ತು ಈಗ ಎಲ್ಲ ವಿಷಯಗಳು ನಿರ್ಧಾರವಾಗುವ ಹಂತಕ್ಕೆ ಬಂದು ತಲುಪಿವೆ, ” ಎಂದು ಬಚ್ಚನ್ ಕುಟುಂಬದ ಹತ್ತಿರದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೂ ಮೊದಲು ಅಮಿತಾಭ್ ಬಚ್ಚನ್ ಅವರು ಐಶ್ವರ್ಯಾ ಅವರ ಇನ್ಸ್ಟಾ ಅನ್ ಫಾಲೋ ಮಾಡಿದ ಬೆನ್ನಲ್ಲೇ, ಐಶ್ವರ್ಯಾ ಮತ್ತು ಅಭಿಷೇಕ್ ಡಿವೋರ್ಸ್ ಆಗಲಿದ್ದಾರೆಂಬ ಸುದ್ದಿ ಹರಡಿತ್ತು.

ಟೈಮ್ಸ್ ನೌ ವರದಿಯ ಪ್ರಕಾರ, ಐಶ್ವರ್ಯಾ ಬಚ್ಚನ್ ನಿವಾಸದಿಂದ ಹೊರಬಂದಿದ್ದಾರೆ. ಅವರು ಈಗ ತಮ್ಮ ಹೆಚ್ಚಿನ ಸಮಯವನ್ನು ತಮ್ಮ ತಾಯಿಯ ಮನೆಯಲ್ಲಿ ಕಳೆಯುತ್ತಾರೆ. ಒಂದೊಮ್ಮೆ ಬಚ್ಚನ್ ಅವರ ನಿವಾಸಕ್ಕೆ ಬಂದರೆ, ಅಲ್ಲಿ ಅತ್ತೆ-ಮಾವನಿಂದ ಸಂಪೂರ್ಣವಾಗಿ ದೂರವಾಗಿ ಪ್ರತ್ಯೇಕವಾಗಿ ಗಂಡನ ಜತೆ ವಾಸಿಸುತ್ತಿದ್ದಾರೆ.
ಅತ್ತೆ-ಸೊಸೆ ಮಾತಿಲ್ಲ?
ಐಶ್ವರ್ಯಾ ಮತ್ತು ಅವರ ಅತ್ತೆ ಜಯಾ ಬಚ್ಚನ್ ಕಳೆದ ಕೆಲವು ವರ್ಷಗಳಿಂದ ಮಾತನಾಡುವುದನ್ನು ನಿಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಉದ್ದೇಶಪೂರ್ವಕವಾಗಿ ಇಬ್ಬರು ಪರಸ್ಪರ ನಿರ್ಲಕ್ಷಿಸಿದ್ದಾರೆ ಎಂದು ಹಲವಾರು ವರದಿಗಳು ಹೇಳುತ್ತಿವೆ. ಈ ಅತ್ತೆ ಮತ್ತು ಸೊಸೆಯ ನಡುವಿನ ಘರ್ಷಣೆಯ ಮಧ್ಯದಲ್ಲಿ ಸಿಲುಕಿರುವ ಅಭಿಷೇಕ್, ತನ್ನ ಹೆತ್ತವರ ಮೇಲಿನ ನಿಷ್ಠೆ ಮತ್ತು ತನ್ನ ಹೆಂಡತಿ ಮತ್ತು ಮಗಳ ಮೇಲಿನ ಜವಾಬ್ದಾರಿಗಳ ನಡುವೆ ಸಿಲುಕಿಕೊಂಡಿದ್ದಾರೆ.
ಬಚ್ಚನ್ರ ಪುತ್ರಿ ಶ್ವೇತಾ ಶಾಶ್ವತವಾಗಿ ಜಲ್ಸಾದಲ್ಲಿ ನೆಲೆಸಿರುವುದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಇದು ಐಶ್ವರ್ಯಾ ಮತ್ತು ಆಕೆಯ ಅತ್ತೆಯ ನಡುವಿನ ಈಗಾಗಲೇ ಅಸ್ಥಿರ ಸಂಬಂಧವನ್ನು ಇನ್ನಷ್ಟು ಉಲ್ಬಣಗೊಳಿಸಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.






