ಇತರೆ

ಅಡಮಾನ ಇರಿಸಿದ್ದ ಫ್ಲ್ಯಾಟ್ ನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿ ಕುಂದಾಪುರ ಬ್ಯಾಂಕ್ ಶಾಖೆಗೆ ವಂಚನೆ 

Views: 190

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ಬ್ಯಾಂಕ್ ಶಾಖೆಗೆ ನಂಬಿಕೆ ದ್ರೋಹ ಎಸಗಿ ವಂಚಿಸಿ ಮೋಸ ಮಾಡಿರುವ ಪ್ರಕರಣ ದಾಖಲಾಗಿದೆ.

ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಕುಂದಾಪುರ ಶಾಖೆಯಲ್ಲಿ ಅಡಮಾನ ಇರಿಸಿದ್ದ ಫ್ಲ್ಯಾಟ್  ಅನ್ನು ಮಾರಾಟ ಮಾಡಿ ಬ್ಯಾಂಕಿಗೆ ವಂಚಿಸಿರುವ ಮರವಂತೆಯ ಮೊಹಮ್ಮದ್ ಶಾಕಿರ (39) ಆರೋಪಿ

ಈತ ಕೋಟೇಶ್ವರ ಅಂಕದಕಟ್ಟೆಯಲ್ಲಿರುವ  ‘ಜ್ಯೂಲಿ ಯೋ ರೆಸಿಡೆನ್ಸಿ’ ನೆಲಮಹಡಿಯಲ್ಲಿರುವ ಅಪಾರ್ಟ್‌ಮೆಂಟ್ ನಂಬ್ರ 7ನ್ನು ಅಡಮಾನವಿರಿಸಿ 55 ಲಕ್ಷ ರೂ. ಸಾಲ ಪಡೆದುಕೊಂಡಿದ್ದನು. ಮೂಲ ದಾಖಲೆಗಳು ಬ್ಯಾಂಕ್ ನಲ್ಲಿರುವಾಗಲೇ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಡಗುಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಮಣಿಪಾಲ ಶಾಖೆಯಲ್ಲಿ 45 ಲಕ್ಷ ರೂ. ಸಾಲ ಪಡೆಯಲು ಯತ್ನಿಸಿದಾಗ ಅಲ್ಲಿನ ಅಧಿಕಾರಿಗಳ ಗಮನಕ್ಕೆ ಬಂದು ಪ್ರಕರಣ ದಾಖಲಾಗಿದೆ.

ಆರೋಪಿಯು ಆ ಫ್ಲ್ಯಾಟ್ ಅನ್ನು ಇನ್ನೊಬ್ಬ ಆರೋಪಿ ವಸಂತ ಕುಮಾರ ಕಿದಿಯೂರು ಹೆಸರಿನಲ್ಲಿ ಕುಂದಾಪುರ ಉಪನೋಂದಣಿ ಕಚೇರಿಯಲ್ಲಿ ನೊಂದಣಿ ಮಾಡಿಸಿಕೊಂಡು ವಂಚಿಸಿದ್ದಾನೆ.

 

Related Articles

Back to top button